• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಭಾಷಣದಿಂದ ಕನ್ನಡಿಗರಲ್ಲಿ ತುಸು ನಿರಾಸೆ

By Staff
|


ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಐತಿಹಾಸಿಕ ಸುವರ್ಣ ಕರ್ನಾಟಕ ಆಚರಣೆಗೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಚಾಲನೆ ನೀಡಿದ್ದಾರೆ.

ತಮ್ಮ ಭಾಷಣದಲ್ಲಿ, ನಾಡು-ನುಡಿ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ತಮ್ಮ ಕನಸುಗಳನ್ನು ಹಂಚಿಕೊಂಡರು. ಆದರೆ ಕನಸುಗಳ ಸಾಕ್ಷಾತ್ಕಾರಗೊಳಿಸಲು, ಪೂರಕ ಯೋಜನೆಗಳನ್ನು ಅವರು ಪ್ರಕಟಿಸಲಿಲ್ಲ. ನಾಡು-ನುಡಿ ರಕ್ಷಣೆಗಾಗಿ ಮಹತ್ವದ ಯಾವ ಕಾರ್ಯಕ್ರಮಗಳನ್ನು ಅವರು ಪ್ರಕಟಿಸಲಿಲ್ಲ. ಹೀಗಾಗಿ ಬಹುತೇಕ ಕನ್ನಡಿಗರು ನಿರಾಸೆಗೊಂಡರು.

ಭಾಷಣದ ಮುಖ್ಯಾಂಶಗಳು :

  • ಕವಿ ಜಿ.ಎಸ್‌.ಶಿವರುದ್ರಪ್ಪ ಅವರಿಗೆ ಮೂರನೇ ರಾಷ್ಟ್ರಕವಿ ಗೌರವ.
  • ಬೆಂಗಳೂರು ಸೇರಿದಂತೆ 11 ಊರುಗಳಿಗೆ ಕನ್ನಡದ ಹೆಸರು.
  • ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಕಡ್ಡಾಯ ಜಾರಿ. ಗ್ರಾಮೀಣರಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಕ್ರಮ ಅನಿವಾರ್ಯ. ವ್ಯಾವಹಾರಿಕ ದೃಷ್ಟಿಯಿಂದ ಇಂಗ್ಲಿಷ್‌ ಕಲಿಯೋಣ.. ಇಂಗ್ಲಿಷ್‌ ಸವಾರಿಗೆ ಸರ್ಕಾರ ಅವಕಾಶ ನೀಡದು. ಎಂದೆಂದಿಗೂ ಕನ್ನಡವೇ ಈ ನೆಲದ ರಾಜಭಾಷೆ.
  • ಶಾಸ್ತ್ರೀಯ ಭಾಷೆ ಸ್ಥಾನ ಮಾನ ಪಡೆಯುವುದು ನಮ್ಮ ಹಕ್ಕು.
  • ಒತ್ತಡಕ್ಕೆ ಮಣಿಯದೇ ರಾಜ್ಯೋತ್ಸವ ಮತ್ತು ಏಕೀಕರಣ ಪ್ರಶಸ್ತಿಗಳ ಸಂಖ್ಯೆ ಮಿತಿಗೊಳಿಸಿ, ಪಾವಿತ್ರ್ಯ ರಕ್ಷಣೆ.
  • ಭಾಷಣದಲ್ಲಿ ಅಲ್ಲಲ್ಲಿ ಕುವೆಂಪು, ಕೆ.ಎಸ್‌.ನರಸಿಂಹಸ್ವಾಮಿ, ಹುಯಿಲಗೋಳ ನಾರಾಯಣರಾಯ ಮತ್ತಿತರ ಕವನಗಳ ಪ್ರಸ್ತಾಪ.
  • ರಾಜ್‌ಕುಮಾರ್‌ ಇಂದು ಇದ್ದಿದ್ದರೆ ಸಂತಸದಲ್ಲಿ ತೇಲಾಡುತ್ತಿದ್ದರು. ಚಿತ್ರರಂಗದ ಸಮಸ್ಯೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ.
ಭಾಜಪ ಅಸಮಾಧಾನ : ರಾಜ್ಯೋತ್ಸವ ಸಮಾರಂಭದ ಉದ್ದಕ್ಕೂ ಮುಖ ಊದಿಸಿಕೊಂಡು ಕುಳಿತಿದ್ದ ಯಡಿಯೂರಪ್ಪ, ಅತೃಪ್ತಿಯಿಂದ ಚಡಪಡಿಸುತ್ತಿದ್ದಂತೆ ತೋರುತ್ತಿತ್ತು. ರಾಜ್ಯ ಸರ್ಕಾರದ ಧೋರಣೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more