ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನ ಸಮೂಹ.. ಮಳೆ ಚೆಲ್ಲಾಟ
ಬೆಂಗಳೂರು : ನಿಗದಿಯಂತೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ 5ಗಂಟೆಗೆ ಸರಿಯಾಗಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಆರಂಭಗೊಂಡಿದೆ. ಈ ಮಧ್ಯೆ ಮಳೆಯೂ ಆರಂಭಗೊಂಡಿದೆ.
ಸಾರಂಗ್ ತಂಡ, ಮೂರು ಹೆಲಿಕ್ಯಾಪ್ಟರ್‌ಗಳಲ್ಲಿ ನೆರೆದ ಜನರ ಮೇಲೆ ಪುಷ್ಟವೃಷ್ಟಿ ನಡೆಸಿದ ಬೆನ್ನಲ್ಲಿಯೇ ಮಳೆ ಆರಂಭಗೊಂಡಿದೆ. ಮಳೆ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಕಾಡುತ್ತಿದೆ.
ಮಳೆಗೂ ಮುನ್ನ ಹೆಲಿಕ್ಯಾಪ್ಟರ್‌ಗಳು ನಡೆಸಿದ ಪುಷ್ಟವೃಷ್ಟಿಯಿಂದ ಜನರು ಪುಳಕಿತರಾದರು. ಚಪ್ಪಾಳೆ ಮತ್ತು ಕೇಕೆ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.
ಅಪರ್ಣ ಮತ್ತು ಶಂಕರ್ ಪ್ರಕಾಶ್ ವೇದಿಕೆಯನ್ನೇರಿ ಕಾರ್ಯಕ್ರಮದ ನಿರೂಪಣೆ ನಡೆಸುತ್ತಿದ್ದಾರೆ. ಕ್ರೀಡಾಂಗಣದ ತುಂಬ ಕನ್ನಡ ಧ್ವಜಗಳು ಹಾರಾಡುತ್ತಿವೆ.
ಚಂದನ ಚಾನೆಲ್‌ನಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿದ್ದು, ವಿಶ್ವಕನ್ನಡಿಗರು ಸುವರ್ಣ ಕರ್ನಾಟಕದ ಸಂಭ್ರಮವನ್ನು ಮನೆಯಂಗಳದಲ್ಲಿಯೇ ಸವಿಯುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)