ಬ್ಯಾಂಗಲೂರ್ಗೆ ಬೈಬೈ ಹೇಳಿ.. ಬೆಂಗಳೂರಿಗೆ ಜೈಜೈ ಎನ್ನಿ!
ಬೆಂಗಳೂರು : ಸುವರ್ಣ ಕರ್ನಾಟಕ ಸಂಭ್ರಮದ ಹಿನ್ನೆಲೆಯಲ್ಲಿ ರಾಜಧಾನಿ ನಗರ ಸೇರಿದಂತೆ ವಿವಿಧ ನಗರಗಳ ಹೆಸರುಗಳನ್ನು ಬುಧವಾರ(ನ.1) ಕನ್ನಡೀಕರಿಸಲಾಗುತ್ತಿದೆ.
ಇನ್ನು ಮುಂದೆ ಬ್ಯಾಂಗಲೂರ್, ಬೆಂಗಳೂರು ಆಗಲಿದೆ. ಅದೇ ರೀತಿ ಆವರಣದಲ್ಲಿ ಸೂಚಿಸಿರುವಂತೆ ಮೈಸೂರ್(ಮೈಸೂರು), ಬೆಲ್ಗಂ(ಬೆಳಗಾವಿ), ಗುಲ್ಬರ್ಗ(ಕಲ್ಪುರ್ಗಿ), ಹಾಸ್ಪೇಟ್(ಹೊಸಪೇಟೆ), ಹುಬ್ಲಿ(ಹುಬ್ಬಳ್ಳಿ), ಮ್ಯಾಂಗಲೂರ್(ಮಂಗಳೂರು), ಶಿಮೊಗ್ಗ(ಶಿವಮೊಗ್ಗ), ಚಿಕ್ಮಗಗೂರ್(ಚಿಕ್ಕಮಗಳೂರು) ಹೆಸರುಗಳು ಬದಲಾಗಲಿವೆ.
ಯು.ಆರ್.ಅನಂತಮೂರ್ತಿ ಸೇರಿದಂತೆ ನಾಡಿನ ಪ್ರಜ್ಞಾವಂತರು ಹೆಸರು ಬದಲಾವಣೆಗೆ ಸಲಹೆ ನೀಡಿದ್ದರು. ಕುಮಾರಸ್ವಾಮಿ ಸರ್ಕಾರ, ಬೆಳಗಾವಿ ಅಧಿವೇಶನದಲ್ಲಿ ಹೆಸರು ಬದಲಾವಣೆ ಬಗ್ಗೆ ತಾತ್ವಿಕ ತೀರ್ಮಾನ ಕೈಗೊಂಡಿದ್ದರು.
ಹೆಸರು ಬದಲಾವಣೆ ಪ್ರಕ್ರಿಯೆಗಳು ಸರ್ಕಾರದಿಂದ ಆರಂಭವಾಗುತ್ತವೆ. ಈ ಬಗ್ಗೆ ಅಧಿಕೃತ ಪ್ರಕಟಣೆ, ಅಧಿಸೂಚನೆಗಳು ಹೊರಡುತ್ತವೆ. ಅಂತಿಮವಾಗಿ ಈ ಬದಲಾವಣೆಯಾದ ಹೆಸರುಗಳನ್ನು ಬಳಸುವವರು, ಜನಪ್ರಿಯಗೊಳಿಸುವವರು ನಾವು ಮತ್ತು ನೀವು. ಹೀಗಾಗಿ ಇಂದಿನಿಂದಲೇ ಹೊಸ ಹೆಸರುಗಳನ್ನು ಬಳಸೋಣ.. ಕನ್ನಡತನ ಉಳಿಸೋಣ.
(ದಟ್ಸ್ ಕನ್ನಡ ವಾರ್ತೆ)