ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವತ್ತು ವರ್ಷಗಳು ಸವೆದರೂ, ಕನ್ನಡಕ್ಕೊಂದು ಧ್ವಜವಿಲ್ಲ!

By Staff
|
Google Oneindia Kannada News

ಬೆಂಗಳೂರು : ಸುವರ್ಣ ಕರ್ನಾಟಕದ ಸಂಭ್ರಮದ ಮಧ್ಯೆ, ನಾಡಿಗೆ ಅಧಿಕೃತ ಧ್ವಜವಿಲ್ಲ ಎಂಬ ಸಂಗತಿಯನ್ನು ಎಲ್ಲರೂ ಮರೆತಿದ್ದೇವೆ.

ನಾಡು ರೂಪುಕೊಂಡು ಐದು ದಶಕಗಳಾದರೂ ಈ ನಿಟ್ಟಿನಲ್ಲಿ ಚಿಂತನೆಗಳೇ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಹಳದಿ-ಕೆಂಪು ಬಣ್ಣದ ಧ್ವಜವನ್ನೇ ಕನ್ನಡ ಧ್ವಜವಾಗಿ ಬಳಸಿಕೊಂಡು ಬಂದಿದ್ದೇವೆ.

ನಾಡಗೀತೆಯಾಗಿ ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ಗೀತೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಅದೇ ರೀತಿ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ ಧ್ವಜವನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ.

ಒಂದು ನಾಡಿಗೆ ತನ್ನದೇ ಆದ ಧ್ವಜ, ಸಂಕೇತ, ಗೀತೆ ಇರಬೇಕು. ಈ ಮೂರು ಸಂಗತಿಗಳು ಆ ನಾಡಿನ ಅಂತಃಸತ್ವ ಮತ್ತು ಆಶಯಗಳನ್ನು ಬಿಂಬಿಸುತ್ತಿರಬೇಕು. ಕನ್ನಡ ನಾಡಿಗೆ, ಕನ್ನಡಿಗರಿಗೆ ಇಂಥ ಸಂಸ್ಕೃತಿ ಒಗ್ಗಿಬರಲಿ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X