ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್‌ಎಂ ರೇನ್‌ಬೋದಲ್ಲಿ ‘ಗಂಟಲ್‌ಮನ್‌’ ರವಿ ಬೆಳಗೆರೆ!

By Staff
|
Google Oneindia Kannada News

ಬೆಂಗಳೂರು : ರವಿ ಬೆಳಗೆರೆ ಅವರು ಪತ್ರಿಕೆ, ಸಿನಿಮಾ, ಟೀವಿ ಕ್ಷೇತ್ರಗಳನ್ನು ಪ್ರವೇಶಿಸಿ ಯಶಸ್ಸು ಕಂಡವರು. ಈಗ ರೇಡಿಯೋ ಅಂಗಳಕ್ಕೆ ಕಾಲಿಟ್ಟಿದ್ದಾರೆ.‘ravi belagere @ 8 a.m ಓ ಮನಸೇ’ ಕಾರ್ಯಕ್ರಮ ಬುಧವಾರದಿಂದ ಆರಂಭಗೊಂಡಿದೆ.

‘ಕರ್ನಾಟಕದ ಜಂಡಲ್‌ಮನ್‌ಗಳ ಮಧ್ಯೆ ಒಬ್ಬ ಗಂಟಲ್‌ಮನ್‌’ ಎಂದು ತಮ್ಮನ್ನು ಗುರ್ತಿಸಿಕೊಂಡಿರುವ ಬೆಳಗೆರೆ, ಇನ್ನು ಮುಂದೆ ಪ್ರತಿ ದಿನ ಬೆಳಗ್ಗೆ 8ರಿಂದ 9 ಗಂಟೆ ತನಕ ಆಕಾಶವಾಣಿಯ ಎಫ್‌ಎಂ ರೇನ್‌ಬೋ101.3ರಲ್ಲಿ ಸಿಗಲಿದ್ದಾರೆ.

ತಮ್ಮ ಎಂದಿನ ಶೈಲಿಯ ಮಾತಿನ ಮೂಲಕ, ಕೇಳುಗರನ್ನು ತಣಿಸಲಿದ್ದಾರೆ. ಜೊತೆಗೆ ಮೆಚ್ಚಿನ ಕನ್ನಡ ಗೀತೆ(ಚಿತ್ರಗೀತೆ, ಜನಪದ ಗೀತೆ, ಭಾವಗೀತೆ ಇತ್ಯಾದಿ)ಗಳನ್ನು ಕೇಳಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಳುಗರು ದೂರವಾಣಿ ಮೂಲಕ ಪಾಲ್ಗೊಳ್ಳಬಹುದು. ತಮ್ಮ ನೋವು-ನಲಿವು, ಸಮಸ್ಯೆ ಮತ್ತಿತರ ಸಂಗತಿಗಳನ್ನು ಹಂಚಿಕೊಳ್ಳಬಹುದು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X