ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್‌ ರೆಕಾರ್ಡ್‌ನತ್ತ ಗ್ರಾಮೀಣ ಐಟಿ ಕ್ವಿಜ್‌ ದಾಪುಗಾಲು

By Staff
|
Google Oneindia Kannada News

Winners of the Rural IT Quiz, G Arjun Kumar and B S Karthik of St. Josephs PU College, Hassanಬೆಂಗಳೂರು : ಬೆಂಗಳೂರು ಐಟಿ ಮೇಳದ ಹಿನ್ನೆಲೆಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌(ಟಿಸಿಎಸ್‌) ಸಂಘಟಿಸಿದ್ದ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮ, ರಾಜ್ಯದ 9.55ಲಕ್ಷ ವಿದ್ಯಾರ್ಥಿಗಳನ್ನು ಆಕರ್ಷಿಸಿದೆ.

ಈ ದೊಡ್ಡ ಪ್ರಮಾಣದ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮ, ಅನೇಕ ದಾಖಲೆಗಳನ್ನು ನಿರ್ಮಾಣ ಮಾಡಿದೆ. ಒಂದೇ ದಿನ ಕರ್ನಾಟಕದ 9.55ವಿದ್ಯಾರ್ಥಿಗಳು, ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ವಿಶೇಷ. ಈ ಕಾರ್ಯಕ್ರಮದ ಮೂಲಕ ಟಿಸಿಎಸ್‌, ಗಿನ್ನಿಸ್‌ ದಾಖಲೆಗೆ ಪ್ರಯತ್ನಿಸಿದೆ.

ಹಾಸನದ ಸೆಂಟ್‌ ಜೋಸೆಫ್‌ ಕಾಲೇಜು(ಜಿ.ಅರ್ಜುನ್‌, ಬಿ.ಎಸ್‌ ಕಾರ್ತಿಕ್‌), ರಸ ಪ್ರಶ್ನೆಯ ಅಂತಿಮ ಸುತ್ತಿನಲ್ಲಿ ರಾಜ್ಯ ಚಾಂಪಿಯನ್‌ ಕೀರ್ತಿಯನ್ನು ಪಡೆಯಿತು. ಉಡುಪಿ ಲಿಟಲ್‌ ರಾಕ್‌ ಶಾಲೆ(ಪವನ್‌ಕುಮಾರ್‌ ಹೊಳ್ಳ, ಕಾರ್ತಿಕ್‌ ಹೆಬ್ಬಾರ್‌) ಮತ್ತು ಗೋಕಾಕ್‌ನ ಫೋರ್ಬ್‌ ಆಕಾಡೆಮಿ(ಕುಲದೀಪ್‌ ಸಿಂಗ್‌, ರಾಹುಲ್‌ ಜಿ.ವೈದ್ಯ) ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್‌ ಸ್ಥಾನಗಳನ್ನು ಪಡೆದವು.

ಭಾರತದ ಈ ದೊಡ್ಡ ಗ್ರಾಮೀಣ ಐಟಿ ಕ್ವಿಜ್‌, ಲಿಮ್ಕಾ ದಾಖಲೆ ಪುಟಗಳನ್ನು ಪ್ರವೇಶಿಸಿದೆ. ಟಿಸಿಎಸ್‌ ಕಳೆದ ಏಳು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X