• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಉಗ್ರರ ಬಳಿ ಏನೇನಿದ್ದವು ಗೊತ್ತೆ? : ಸಮಗ್ರ ವಿವರ

By Staff
|

Pakistani terrorists Fahad and Ali Hussain arrested in Mysoreಮೈಸೂರು : ವ್ಯವಸ್ಥೆಯಾಳಗಿನ ಲೋಪಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ನಗರದಲ್ಲಿ ಬಂಧಿಸಲ್ಪಟ್ಟಿರುವ ಉಗ್ರರಿಗೆ, ಮೈಸೂರು ನಗರ ಸಭೆ ಜನನ ಪ್ರಮಾಣ ಪತ್ರ ನೀಡಿರುವ ಅಂಶ ಬೆಳಕಿಗೆ ಬಂದಿದೆ.

ಈ ಮಧ್ಯೆಶುಕ್ರವಾರ ಬಂಧನಕ್ಕೆ ಒಳಗಾದ ಉಗ್ರರನ್ನು ಹದಿನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ. ತನಿಖೆ ಮುಂದುವರೆದಿದೆ.

ಪಾಕಿಸ್ತಾನ ಮೂಲದ ಅಲ್‌ ಬದ್ರ್‌ ಭಯೋತ್ಪಾದಕ ಗುಂಪಿಗೆ ಸೇರಿದವರು ಎನ್ನಲಾದ ಈ ಉಗ್ರರಿಂದ ಲ್ಯಾಪ್‌ಟಾಪ್‌, ಸುಮಾರು 2000 ಟೆಲಿಫೋನ್‌ ಸಂಖ್ಯೆಗಳು, ಬಾಂಬ್‌ ನೆಡುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡುವ ಸಿ.ಡಿ.ಗಳು, ಬಾಂಬ್‌ ತಯಾರಿಕಾ ರಾಸಾಯನಿಕಗಳು, ಎ.ಕೆ.47, ಪಿಸ್ತೂಲ್‌, ಬಿನ್‌ ಲಾಡೆನ್‌ ಬಗ್ಗೆ ನಿಮಗೆಷ್ಟು ಗೊತ್ತು ಎನ್ನುವ ಉರ್ದು ಪುಸ್ತಕ, ಸ್ಯಾಡಲೈಟ್‌ ಫೋನ್‌ ಮತ್ತಿತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ಎಂಟು ತಿಂಗಳಿಂದ ಮೈಸೂರಿನಲ್ಲಿ ಉಗ್ರರು ಬೀಡು ಬಿಟ್ಟಿದ್ದರು. ಮೈಸೂರಿನ ರಾಜೀವ್‌ ನಗರದ 2ನೇ ಹಂತದ 4ನೇ ತಿರುವಿನ ನಂ.186ರಲ್ಲಿ ವಾಸವಾಗಿದ್ದರು. ಇವರ ಪೂರ್ವ ಚರಿತ್ರೆ ನಮಗೆ ತಿಳಿದಿರಲಿಲ್ಲ.. ಹೀಗಾಗಿ ಮನೆ ಕೊಟ್ಟೆವು ಎಂದು ಮನೆ ಮಾಲೀಕರು ಹೇಳಿದ್ದಾರೆ.

ಉಗ್ರರ ವಿವರಗಳು :

ಫಹಾದ್‌ : 24ವರ್ಷದ ಈತ, ಎಂಎಸ್ಸಿ ಮತ್ತು ಕಂಪ್ಯೂಟರ್‌ ಕೋರ್ಸ್‌ ಮಾಡಿದ್ದಾನೆ. ಕರಾಚಿಯವನು. ಬಾಂಬ್‌ ತಯಾರಿಕೆ ಮತ್ತು ಸಾಫ್ಟ್‌ವೇರ್‌ ಅಭಿವೃದ್ಧಿಯಲ್ಲಿ ಪರಿಣತಿ ಪಡೆದಿದ್ದಾನೆ. ಕಾಶ್ಮೀರದಲ್ಲಿ 22 ಯೋಧರನ್ನು ಹತ್ಯೆ ಮಾಡಿದ ಆರೋಪಿ. ಸರ್ಕಾರಿ ನೌಕರನೆಂಬ ನಕಲಿ ದಾಖಲೆಯನ್ನು ಈತ ಹೊಂದಿದ್ದಾನೆ.

ಅಲಿ ಹುಸೇನ್‌ : ಪಾಕಿಸ್ತಾನದ ಮುನ್ಯಿರಾಗೆ ಸೇರಿದವನು. ವಯಸ್ಸು 24. ಓದಿರುವುದು ಒಂಬತ್ತನೇ ತರಗತಿ. ಪಾಕಿಸ್ತಾನದಿಂದ ನೇಮಕಗೊಂಡಿರುವ ಉಗ್ರ. ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿಯೇ ಇದ್ದಾನೆ.

ಬೆಂಗಳೂರಿನ ವಿಕಾಸ ಸೌಧ, ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥಾನ(ಸಿಐಐಎಲ್‌) ಮತ್ತಿತರ ಕಟ್ಟಡಗಳ ಸ್ಫೋಟಿಸಲು ಉಗ್ರರು ಸಂಚು ನಡೆಸಿದ್ದರು ಎನ್ನಲಾಗಿದೆ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more