ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯದ ಹಬ್ಬ : ಲಾಲ್‌ಬಾಗ್‌ನಲ್ಲಿ ಜಾನಪದ ಜಾತ್ರೆ

By Staff
|
Google Oneindia Kannada News

ಬೆಂಗಳೂರು : ನಮ್ಮ ರಾಜ್ಯದ ಜನಪದದ ಹಿರಿಮೆ ದೊಡ್ಡದು. ಆದರೆ, ಅದರ ಎಷ್ಟೋ ಮುಖಗಳು ನಮಗೆ ಗೊತ್ತೇ ಇಲ್ಲ. ನೀವು ಅದರ ಕೆಲವು ಆಯಾಮಗಳನ್ನು ಮುದ್ದಾಂ ನೋಡಬೇಕಿದ್ದರೆ ಶನಿವಾರ ಮತ್ತು ಭಾನುವಾರ (ಅ. 28, 29) ಬೆಂಗಳೂರಿನ ಲಾಲ್‌ಬಾಗಿಗೆ ಹೋಗಿರಿ. ಅಲ್ಲಿ ನಿಮಗಾಗಿ ವರ್ಣಮಯ ಜಾನಪದ ಜಾತ್ರೆ ಸಜ್ಜಾಗಿದೆ.

ಜಾನಪದ ಜಾತ್ರೆ, ಸುವರ್ಣ ಕರ್ನಾಟಕ ಸಂಭ್ರಮದ ನಿಮಿತ್ತ ಕರ್ನಾಟಕದಾದ್ಯಂತ ನಡೆಯಲಿರುವ ಅನೇಕಾನೇಕ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಇದೂ ಒಂದು. ಈ ಸಂಬಂಧ ರಾಜ್ಯಸರಕಾರ ಆಯೋಜಿಸಿರುವ ಜಾತ್ರೆಯಲ್ಲಿ ಕಿನ್ನರಿ ಮೇಳ, ಜಗ್ಗಲಿಗೆ, ಕರಡಿ ಮಜಲು, ಬುರ್ರಕಥಾ, ಸೋಮನ ಕುಣಿತ ಭೂತ ನೃತ್ಯ, ಕೀಲುಕುದುರೆ, ಉಮ್ಮತ್ತಾಟ, ಕೋಲಾಟ ಮತ್ತು ಲಂಬಾಣಿ ನೃತ್ಯಗಳನ್ನು ಏರ್ಪಡಿಸಲಾಗಿದೆ.

ಹೋಗುವಾಗ ಕೆಮರಾ ಕಂಕುಳಲ್ಲಿರಲಿ. ಪಾರ್ಕಿಂಗ್‌ ಆ ಪ್ರದೇಶದಲ್ಲಿ ಒಂದು ದೊಡ್ಡ ತಲೆನೋವು. ಸಂದಿಗೊಂದಿಗಳಲ್ಲಿ ಕಾರು , ಸ್ಕೂಟರ್‌ ನಿಲ್ಲಿಸಿ ಕೈಮುಗಿದು ಒಳಗೆ ಹೋಗಿ, ಅದು ಸಸ್ಯ ಕಾಶಿ.

ಹಂಪಿ ಉತ್ಸವ : ನವೆಂಬರ್‌ನಲ್ಲಿ ನಡೆಯಲಿರುವ ಹಂಪಿ ಉತ್ಸವವನ್ನು ಸರ್ಕಾರ ಅದ್ಧೂರಿಯಾಗಿ ನಡೆಸಲಿದೆ. ಉಗ್ರರ ಚಟುವಟಿ ಹಿನ್ನೆಲೆ ಉತ್ಸವಕ್ಕೆ ಬಿಗಿ ಭದ್ರತೆ ಒದಗಿಸಲಾಗುವುದು ಎಂದು ಸಚಿವ ರಾಮುಲು ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X