ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆ.ಜಿ. ಈರುಳ್ಳಿಗೆ ರೂ.1.50! : ರೈತರ ಕಣ್ಣಲ್ಲೀಗ ನೀರು
ಹುಬ್ಬಳ್ಳಿ : ರೈತರಿಗೆ ರೂ.1.50ರಿಂದ ರೂ.2.00 ಬೆಂಬಲ ಬೆಲೆ ನೀಡಿ, ಸರ್ಕಾರ ಈರುಳ್ಳಿ ಖರೀದಿಸುತ್ತಿದೆ. ಈರುಳ್ಳಿ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕೆಂದು ಧಾರವಾಡ ಜಿಲ್ಲಾ ರೈತರು ಒತ್ತಾಯಿಸಿದ್ದಾರೆ.
ಈ ಸಂಬಂಧ ಸರ್ಕಾರದ ಗಮನ ಸೆಳೆಯಲು, ಜಿಲ್ಲೆಯ ರೈತರು ಹೆಬಸೂರು, ಹಾರೋ ಬೆಳವಡಿ, ಕುಸುಗಲ್ ಮತ್ತಿತರೆಡೆ ರಸ್ತೆ ತಡೆ ನಡೆಸಿ, ಟೈರ್ ಸುಟ್ಟು ತಮ್ಮ ಅಸಮಾಧಾನವನ್ನು ಪ್ರಕಟಿಸಿದರು.
ಸರ್ಕಾರ ತನ್ನ ನಿರ್ಲಕ್ಷ್ಯವನ್ನು ಮುಂದುವರೆಸಿದರೆ, ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ.
ಪ್ರಸ್ತುತ ಈರುಳ್ಳಿಯನ್ನು ಸರ್ಕಾರ ಕ್ವಿಂಟಾಲ್‌ಗೆ 150-200 ರೂ. ನೀಡಿ ಖರೀದಿಸುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬೆಂಬಲ ಬೆಲೆ ಹೆಚ್ಚಿಸುವಂತೆ ರೈತರು ಕಳೆದ ವಾರದಿಂದಲೂ ಶಾಂತಯುತವಾಗಿ ಧರಣಿ ನಡೆಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಕೆಂಡ ಸಂಪಿಗೆಯಲ್ಲಿ ಉಳ್ಳಾಗಡ್ಡಿ ನ್ಯೂಸ್