ಗೋವಾ ಟೂರ್ ಗೋಳಾಯ್ತು : ಅಪಘಾತದಲ್ಲಿ 7 ಸಾವು
ಬೆಂಗಳೂರು : ಗೋವಾ ಪ್ರವಾಸಕ್ಕೆ ತೆರಳಿದ್ದ ಮೂವರು ಮಹಿಳೆಯರು ಸೇರಿದಂತೆ ಏಳು ಪ್ರಯಾಣಿಕರು, ವಾಹನ ಅಪಘಾತದಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಇನ್ನಿತರ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ನತದೃಷ್ಟ ವ್ಯಾನ್ನಲ್ಲಿದ್ದವರು, ದೀಪಾವಳಿಯ ಸಾಲು ರಜೆಗಳ ಹಿನ್ನೆಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದ ರು. ಪ್ರವಾಸ ಮುಗಿಸಿಕೊಂಡು, ಮಂಗಳೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದರು. ಇವರ ವಾಹನಕ್ಕೆ ನಿಟ್ಟೂರು ಕ್ರಾಸ್ ಸಮೀಪ(ತುಮಕೂರು ಜಿಲ್ಲೆ) ಲಾರಿಯಾಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಲಾರಿ ತುಮಕೂರಿನಿಂದ ತಿಪಟೂರಿಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೂರು ಕುಟುಂಬಗಳು(ಗಂಡ-ಹೆಂಡತಿ) ಬಲಿಯಾಗಿವೆ. ಮೃತರಾದ ಪುರುಷರು, ಬೆಂಗಳೂರಿನ ಡೈಸ್ ಇಂಟರ್ ನ್ಯಾಷನಲ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ 30ರಿಂದ 35ವರ್ಷದೊಳಗಿನವರು.
ಮೃತರನ್ನು ಬೊಪ್ಪಣ್ಣ, ಕಿರಣ್, ಸಚಿನ್, ಪ್ರೀತಿ, ವಿಂಕಿ, ಸರಿತಾ, ವ್ಯಾನ್ ಚಾಲಕ ನಾಗರಾಜ್ ಎಂದು ಗುರ್ತಿಸಲಾಗಿದೆ. ಗಾಯಾಳುಗಳಿಗೆ ತುಮಕೂರು ಮತ್ತು ಗುಬ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಹನ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಗಂಟೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
(ಯುಎನ್ಐ)