• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರಹ ಸೃಷ್ಟಿಕರ್ತ ವಾಸುಗೆ ಬೆಂಗಳೂರಿನಲ್ಲಿ ಆತ್ಮೀಯ ಸನ್ಮಾನ

By Staff
|


Baraha Sheshadrivasu felicitation in Bangalore on October 29ಕನ್ನಡಸಾಹಿತ್ಯಡಾಟ್‌ಕಾಂ ಬಳಗ ಅಕ್ಟೋಬರ್‌ 29ರಂದು ಬರಹ ವಾಸು ಅವರಿಗೆ ಸನ್ಮಾನ ಮಾಡಲಿದ್ದು, ಇದೇ ಸಂದರ್ಭದಲ್ಲಿ ಅವರೊಂದಿಗೆ ಸಂವಾದವನ್ನೂ ಏರ್ಪಡಿಸಿದೆ.

ಕನ್ನಡದಲ್ಲಿ ದೊರೆಯುತ್ತಿರುವ ಕಂಪ್ಯೂಟರ್‌ ತಂತ್ರಾಂಶಗಳಲ್ಲಿ ಬರಹದ್ದೇ ಒಂದು ವೈಶಿಷ್ಟ್ಯ. ಅದನ್ನು ರೂಪಿಸಿದವರು ಕನ್ನಡಿಗರೇ ಆದ ಶೇಷಾದ್ರಿವಾಸು ಚಂದ್ರಶೇಖರ್‌. ವಿಶ್ವಾದ್ಯಂತ ಅಸಂಖ್ಯಾತ ಕನ್ನಡಿಗರು ಬರಹದ ಮೂಲಕ ಕನ್ನಡದ ಒಡನಾಟ ಇಟ್ಟುಕೊಂಡಿದ್ದಾರೆ. ಅತ್ಯಂತ ಸುಲಭವಾಗಿ ಬಳಸಬಹುದಾದ ಈ ತಂತ್ರಾಂಶವನ್ನು ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ ವಾಸು. ಶೇಷಾದ್ರಿವಾಸು ಚಂದ್ರಶೇಖರ್‌ ಈಗ ‘ಬರಹ ವಾಸು’ ಎಂದೇ ಖ್ಯಾತರಾಗಿದ್ದಾರೆ.

ಅಮೆರಿಕಾದಲ್ಲಿ ವಾಸಿಸುತ್ತಿರುವ ವಾಸು, ಕಾರ್ಯ ನಿಮಿತ್ತ ನಾಡಿನ ಪ್ರವಾಸದಲ್ಲಿದ್ದಾರೆ. ಅವರನ್ನು ಗೌರವಿಸುವ ಮೌಲಿಕ ಕೆಲಸವನ್ನು ಕನ್ನಡಸಾಹಿತ್ಯಡಾಟ್‌ಕಾಂ ಮಾಡುತ್ತಿರುವುದು ಶ್ಲಾಘನೀಯ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ವಹಿಸಲಿದ್ದಾರೆ. ಇವರು ಮುನ್ನುಡಿ, ಅತಿಥಿ, ಬೇರು, ತುತ್ತೂರಿ ಚಿತ್ರಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದವರು. ಇದಲ್ಲದೆ ಅನೇಕ ಸಾಕ್ಷ್ಯ ಚಿತ್ರ ಹಾಗೂ ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

ಸ್ಥಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹಳೇ ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಕಾವೇರಿ ಭವನದ ಹತ್ತಿರ

ದಿನಾಂಕ ಮತ್ತು ಸಮಯ : ಅಕ್ಟೋಬರ್‌ 29, ಬೆಳಗ್ಗೆ 10.00 ಗಂಟೆ

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more