ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಆ್ಯಡಮ್‌ ಬಿದ್ದಪ್ಪ, ಈಗ ಅಪ್ಪ ಪ್ರಸಾದ್‌ ಬಿದ್ದಪ್ಪ

By Staff
|
Google Oneindia Kannada News

Prasad Bidappas son Adam Bidappaಬೆಂಗಳೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವರನ್ನು ಅವಾಚ್ಯ ಪದಗಳಿಂದ ಬೈದ ಆರೋಪದ ಮೇಲೆ ಫ್ಯಾಷನ್‌ ತಜ್ಞ ಪ್ರಸಾದ್‌ ಬಿದ್ದಪ್ಪ ಪುತ್ರ ಆ್ಯಡಮ್‌ ಬಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ(ಅಕ್ಟೋಬರ್‌ 19) ಮಧ್ಯರಾತ್ರಿ 12ಗಂಟೆಯಾದರೂ ರೆಸಿಡೆನ್ಸಿ ರಸ್ತೆಯಲ್ಲಿನ ಸ್ಪಿನ್‌ ಪಬ್‌ ಮುಚ್ಚಲಿಲ್ಲ. ರಾತ್ರಿ ಗಸ್ತಿನಲ್ಲಿದ್ದ ಡಿಸಿಪಿ ಛಬ್ಬಿ, ಇಬ್ಬರು ಪೇದೆಗಳನ್ನು ಕಳುಹಿಸಿ ಪಬ್‌ ಮುಚ್ಚುವಂತೆ ಸೂಚಿಸಿದರು. ಮುಖ್ಯ ಪೇದೆ ಭೀಮಾ ನಾಯಕ್‌, ಪೇದೆ ವೀರಣ್ಣ ಪಬ್‌ ಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಆ್ಯಡಮ್‌ ಬಿದ್ದಪ್ಪ ಏಕಾಏಕಿ ದಾಳಿ ನಡೆಸಿದ್ದರಿಂದ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಸಾದ್‌ ಬಿದ್ದಪ್ಪ ಪತ್ನಿ, ಆ್ಯಡಮ್‌ ಬಿದ್ದಪ್ಪ ತಾಯಿ ಜೂಡಿತ್‌ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಡಿಸಿಪಿ ಛಬ್ಬಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಬಿದ್ದಪ್ಪ ಪ್ರತಿಕ್ರಿಯೆ : ಶುಕ್ರವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಸಾದ್‌ ಬಿದ್ದಪ್ಪ, ನನ್ನ ಮಗ ಹಾಗೂ ಹೆಂಡತಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಲಂಚ ನೀಡಿದರೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ನಾನು ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ. ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X