ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮೂಲದ ವಿಜ್ಞಾನಿಗೆ ಆಸ್ಟ್ರೆಲಿಯಾದ ಪ್ರತಿಷ್ಠಿತ ಪ್ರಶಸ್ತಿ

By Staff
|
Google Oneindia Kannada News

ಮೆಲ್ಬೋರ್ನ್‌ : ಭಾರತೀಯ ಮೂಲದ ಜೀವವಿಜ್ಞಾನಿ ಮಂಡ್ಯಂ ಶ್ರೀನಿವಾಸನ್‌ಗೆ ಆಸ್ಟ್ರೇಲಿಯಾದ ಪ್ರತಿಷ್ಠಿತ ‘ಪ್ರಧಾನಮಂತ್ರಿ ವಿಜ್ಞಾನ ಪ್ರಶಸ್ತಿ’ ಪ್ರಾಪ್ತವಾಗಿದೆ.

Mandyam Srinivasanಅವರು ಜೇನುಹುಳುಗಳ ಹಾರಾಟ ಕೌಶಲ್ಯವನ್ನು ವಿಮಾನಗಳಲ್ಲಿ ಅಳವಡಿಸುವ ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ಈ ಸಂಶೋಧನೆ ಆಧರಿಸಿ, ಆಸ್ಟ್ರೇಲಿಯಾದ ರಕ್ಷಣಾ ಮತ್ತು ನಾಗರಿಕಯಾನ ಕ್ಷೇತ್ರದ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಚಲನೆಯಲ್ಲಿ ಭಾರೀ ತಾಂತ್ರಿಕ ಪ್ರಗತಿ ಸಾಧಿಸಲಾಗಿದೆ.

ಅವರ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 3ಲಕ್ಷ ಡಾಲರ್‌ ನಗದು ಒಳಗೊಂಡಿದೆ. 56ವರ್ಷದ ಕನ್ನಡಿಗ ಶ್ರೀನಿವಾಸನ್‌ ಬೆಂಗಳೂರು ಮೂಲದವರು. ಪ್ರಸ್ತುತ ಅವರು ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲೇ ಎಲೆಕ್ಟ್ರಿಕಲ್‌ ಇಂಜಿನೀಯರಿಂಗ್‌ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಯಾಲೆ ವಿಶ್ವವಿದ್ಯಾಲಯದಿಂದ ಇಂಜಿನೀಯರಿಂಗ್‌ ಹಾಗೂ ಅನ್ವಯಿಕ ವಿಜ್ಞಾನದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ರಾಷ್ಟ್ರೀಯ ವಿವಿಯಿಂದ ಡಾಕ್ಟರ್‌ ಆಫ್‌ ಸೈನ್ಸ್‌ ಪದವಿಯನ್ನೂ ಗಳಿಸಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X