ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಡಿತ್‌ ರವಿಶಂಕರ್‌ಗೆ ನ್ಯುಮೋನಿಯಾ : ಚೇತರಿಕೆ

By Staff
|
Google Oneindia Kannada News

ವಾಷಿಂಗ್ಟನ್‌ : ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ವಿಶ್ವವಿಖ್ಯಾತ ಸಿತಾರ್‌ ವಾದಕ ರವಿಶಂಕರ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Sitar Maestro Pandit Ravishankarಶ್ವಾಸಕೋಶದ ತೊಂದರೆಗೊಳಗಾದ ಕಾರಣ ಅವರನ್ನು ವಾರದ ಹಿಂದೆ ಸ್ಯಾನ್‌ಡಿಯಾಗೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು ಕಳವಳ ಪಡಬೇಕಾಗಿಲ್ಲ ಎಂದು ಅವರ ವಕ್ತಾರ ರೋಬಿನ್‌ ಪಾಲ್‌ ಹೇಳಿದ್ದಾರೆ.

ಅವರ ಆರೋಗ್ಯ ವಿಚಾರಿಸಿ ದೇಶ(ಭಾರತ)ದ ವಿವಿಧೆಡೆಗಳಿಂದ ಸಾವಿರಾರು ಕರೆಗಳು ಬರುತ್ತಿವೆ. 86ರ ಹರೆಯದಲ್ಲಿರುವ ಅವರು, ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X