• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಮುಂಡೇಶ್ವರಿ ಕ್ಷೇತ್ರ : ಸಿದ್ದು ಮುಖಭಂಗ ಸಾಧ್ಯವೇ?

By Staff
|


ನಟ ಸುದೀಪ್‌ ಸೇರಿದಂತೆ ಎಲ್ಲರಿಗೂ ಈ ಕ್ಷೇತ್ರದ ಮೇಲೆಯೇ ಕಣ್ಣು. ಚುನಾವಣೆ ಕಾವು ಹೇಗಿದೆ ಎಂಬುದನ್ನು ನೋಡಲು ಕ್ಷೇತ್ರಕ್ಕೆ ಹೋಗೋಣ ಬನ್ನಿ...

  • ಶೋಭರಾಜ್‌, ಮೈಸೂರು
ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮರುಚುನಾವಣೆ, ತೀವ್ರ ಕುತೂಹಲ ಹುಟ್ಟಿಸಿದೆ. ಈ ಚುನಾವಣೆ ಮೂಲಕ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈ ಚುನಾವಣೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆ.

ಚುನಾವಣಾ ದಿನಾಂಕದ ಅಧಿಸೂಚನೆ ಹೊರಬೀಳುವ ಮುನ್ನವೇ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಮತದಾರರು ರಾಜಕಾರಣಿಗಳ ಸರ್ಕಸ್ಸುಗಳನ್ನು ಕಂಡು ಮೂಕರಾಗಿದ್ದಾರೆ.

ಚುನಾವಣೆ ಯಾಕೆ? :

ಮೈಸೂರು ಭಾಗದಲ್ಲಿ ಹಿಂದೆ ಜೆಡಿಎಸ್‌ಗೆ ಶಕ್ತಿ ತುಂಬುತ್ತಿದ್ದ ಸಿದ್ದರಾಮಯ್ಯ, ಬದಲಾದ ಸನ್ನಿವೇಶಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್‌ ಪ್ರವೇಶಿಸಿದರು. ಆ ಸಂದರ್ಭದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮರುಚುನಾವಣೆಗೆ ಆಸ್ಪದ ನೀಡಿದ್ದಾರೆ.

ಸಿದ್ದರಾಮಯ್ಯ ತಮ್ಮ ವರ್ಚಸ್ಸಿನಿಂದ ಗೆದ್ದು, ದೇವೇಗೌಡರ ಮುಂದೆ ತೊಡೆ ತಟ್ಟುವ ಬಯಕೆ ಹೊಂದಿದ್ದಾರೆ. ಅವರ ಹಿಂದೆ ನಿಂತಿರುವ ಕಾಂಗ್ರೆಸ್‌ ಗುಂಪು, ಜೆಡಿಎಸ್‌ಗೆ ಮರ್ಮಾಘಾತ ಮಾಡಲು ಪ್ರಯತ್ನಿಸುತ್ತಿದೆ.

ಜೆಡಿಎಸ್‌ಗೆ ಸತ್ವಪರೀಕ್ಷೆ :

ಈ ಕ್ಷೇತ್ರದಲ್ಲಿ ಮತ್ತೆ ಪಕ್ಷದ ಬಾವುಟ ಹಾರಿಸಿ, ಸಿದ್ದರಾಮಯ್ಯ ಅವರ ಮುಖಭಂಗ ಮಾಡುವ ಬಯಕೆ ಜೆಡಿಎಸ್‌ ನಾಯಕರಲ್ಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಅವರ ಸಹೋದರ ಎಚ್‌.ಡಿ.ರೇವಣ್ಣ ಉತ್ಸುಕರಾಗಿದ್ದಾರೆ. ಭರವಸೆಗಳ ಮಳೆ ಸುರಿಸಿ, ಮತದಾರರ ಮನವೊಲಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ(ಸಿದ್ದರಾಮಯ್ಯ ರಾಜೀನಾಮೆ ನಂತರ ಏಳು ಸಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿನೀಡಿದ್ದಾರೆ).

ಬಿಜೆಪಿ ತೊಡರುಗಾಲು :

ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಆ ಸ್ಥಾನವನ್ನು ಕಸಿಯಲು ಕಣ್ಣಿಟ್ಟಿದೆ. ಕಾಂಗ್ರೆಸ್‌ ಸೋಲಿಸಲು ದೇವೇಗೌಡರ ಕುಟುಂಬಕ್ಕೆ ಮನಸ್ಸಿದ್ದರೆ ನಮಗೆ ಆ ಸ್ಥಾನ ನೀಡಲಿ. ಇಲ್ಲದಿದ್ದರೆ ಕಾಂಗ್ರೆಸ್‌-ಜೆಡಿಎಸ್‌-ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಅನಿವಾರ್ಯವಾಗಲಿದೆ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿದ್ದು ಪ್ರಾಬಲ್ಯ :

ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರಿದ್ದಾರೆ. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಪ್ಪಣ್ಣ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ಎಲ್‌.ರೇವಣಸಿದ್ದಯ್ಯ ಈಗ ಸಿದ್ದರಾಮಯ್ಯ ಜೊತೆಯಲ್ಲಿದ್ದಾರೆ. ಅದೆಲ್ಲಕ್ಕೂ ಮಿಗಿಲಾಗಿ ಕ್ಷೇತ್ರದಲ್ಲಿ ಸುಮಾರು 60ಸಾವಿರ ಕುರುಬರಿದ್ದಾರೆ!

ಜೆಡಿಎಸ್‌ ಅಭ್ಯರ್ಥಿಗಳು :

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3.68 ಲಕ್ಷ ಮತದಾರರಿದ್ದಾರೆ. ಅದರಲ್ಲಿ 60ಸಾವಿರ ಲಿಂಗಾಯಿತರು, 55ಸಾವಿರ ಒಕ್ಕಲಿಗರು, 60ಸಾವಿರ ಕುರುಬರು, 45ಸಾವಿರ ನಾಯಕ ಜನಾಂಗದವರು ಇದ್ದಾರೆ. ಹೀಗಾಗಿ ಯಾವ ಜನಾಂಗದವರಿಗೆ ಟಿಕೇಟ್‌ ನೀಡಬೇಕೆಂಬ ಗೊಂದಲ ಜೆಡಿಎಸ್‌ನಲ್ಲಿದೆ.

ಶಾಸಕ ಚಿಕ್ಕಮಾದು, ರಾಜ್ಯಸಭಾ ಸದಸ್ಯ ಎಂ.ರಾಜಶೇಖರ ಮೂರ್ತಿ, ಶಾಸಕ ಚಿದಾನಂದ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌, ರೇವಣ ಸಿದ್ದಯ್ಯ, ಸುತ್ತೂರು ಸ್ವಾಮಿಜಿ ಸಹೋದರ ಷಡಕ್ಷರಸ್ವಾಮಿ, ಗುತ್ತಿಗೆದಾರ ಶಿವಬಸಪ್ಪ ಅವರ ಹೆಸರುಗಳು ಜೆಡಿಎಸ್‌ನಲ್ಲಿ ಕೇಳಿ ಬರುತ್ತಿವೆ.

ರಾಜಕೀಯಕ್ಕೆ ಸುದೀಪ್‌ :

ತಾರಾಮೌಲ್ಯ ಮತ್ತು ನಾಯಕ ಜನಾಂಗದ ಮತಗಳು ನಟ ಸುದೀಪ್‌ ಚುನಾವಣೆಗೆ ನಿಂತರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ ಜಗಲಿಯಲ್ಲಿದೆ. ಈ ಬಗ್ಗೆ ಸುದೀಪ್‌ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಸುದೀಪ್‌ ಸದ್ಯಕ್ಕೆ ಈ ಬಗ್ಗೆ ಏನನ್ನೂ ಬಾಯಿಬಿಟ್ಟು ಹೇಳಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more