ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕೇಶ್‌ ಅಂಬಾನಿ ಈಗ ಭಾರತದ ನಂಬರ್‌ 1 ಶ್ರೀಮಂತ

By Staff
|
Google Oneindia Kannada News

ನವದೆಹಲಿ : ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಮಾಲೀಕ ಮುಕೇಶ್‌ ಅಂಬಾನಿ ಭಾರತದ ನಂಬರ್‌ 1 ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮುಕೇಶ್‌ ಸದ್ಯಕ್ಕೆ 70,000 ಕೋಟಿ ರೂಪಾಯಿಗಳ ವೈಯಕ್ತಿಕ ಸಂಪತ್ತಿನ ಒಡೆಯ ಎನಿಸಿದ್ದಾರೆ. ಆ ಮೂಲಕ, ಈ ಮೊದಲು ದೇಶದ ನಂಬರ್‌ 1 ಸಾಹುಕಾರ ಸ್ಥಾನ ಪಡೆದಿದ್ದ ವಿಪ್ರೋ ಸಂಸ್ಥೆ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರನ್ನು ಹಿಂದೆ ಹಾಕಿದ್ದಾರೆ.

ಸದ್ಯಕ್ಕೆ 64,723 ಕೋಟಿ ರೂಪಾಯಿಗಳ ವೈಯಕ್ತಿಕ ಸಂಪತ್ತು ಹೊಂದಿರುವ ಪ್ರೇಮ್‌ಜಿ ಎರಡನೇ ಸ್ಥಾನಕ್ಕಿಳಿದಿದ್ದಾರೆ.

ಮುಕೇಶ್‌ ಅಂಬಾನಿ ಕಿರಿಯ ಸೋದರ ಅನಿಲ್‌ ಅಂಬಾನಿ ದೇಶದ ಮೂರನೇ ಶ್ರೀಮಂತ ಸ್ಥಾನವನ್ನು ಉಳಿಸಿಕೊಂಡಿದ್ದು, ಅವರ ವೈಯಕ್ತಿಕ ಸಂಪತ್ತು 61,000 ಕೋಟಿ ರೂಪಾಯಿಗಳನ್ನು ಮೀರಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X