ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮೆ ಕಳ್ಳನ ಬಂಧನ : 67ಲಕ್ಷ ಮೌಲ್ಯದ ಆಮೆ ವಶ

By Staff
|
Google Oneindia Kannada News

ಬೆಂಗಳೂರು : 67ಲಕ್ಷ ರೂಪಾಯಿ ಮೌಲ್ಯದ ಆಮೆಗಳನ್ನು ಮಾರಲೆತ್ನಿಸುತ್ತಿದ್ದ ವ್ಯಕ್ತಿಯಾಬ್ಬನನ್ನು ನಗರ ವಿಮಾನ ನಿಲ್ದಾಣ ಅಧಿಕಾರಿಗಳು ಬಂಧಿಸಿದ್ದಾರೆ.

ರಂಗನಾಥ್‌(28)ಎಂಬುವವನೇ ಬಂಧಿತ ವ್ಯಕ್ತಿ. ಒಟ್ಟು 447 ನಕ್ಷತ್ರಾಕಾರದ ಆಮೆಗಳನ್ನು ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತ ಕರ್ನಾಟಕ ಹಾಗೂ ತಮಿಳುನಾಡು ಕರಾವಳಿ ಪ್ರದೇಶಗಳಿಂದ ಆಮೆಗಳನ್ನು ಸಂಗ್ರಹಿಸಿ, ವಿದೇಶಗಳಿಗೆ ಮಾರುತ್ತಿದ್ದ.

ಬಿಳಿ ಚೀಲಗಳಲ್ಲಿ ಆಮೆಗಳನ್ನು ತುಂಬಿಕೊಂಡು ವಿಮಾನ ನಿಲ್ದಾಣಕ್ಕೆ ಬಂದಾಗ, ಸುಂಕ ಅಧಿಕಾರಿಗಳು ಅನುಮಾನಗೊಂಡು ತಪಾಸಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ವ್ಯಕ್ತಿ ಈ ಮೊದಲು ಹಲವಾರು ಬಾರಿ ಆಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎಂದು ಮೂಲಗಳು ಹೇಳಿವೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಆಮೆ 15,000 ರೂಪಾಯಿಗೆ ಮಾರಾಟವಾಗುತ್ತದೆ. ಅಮೆರಿಕಾ, ಸಿಂಗಪುರ, ಹಾಂಗ್‌ಕಾಂಗ್‌ ಮೊದಲಾದ ದೇಶಗಳಲ್ಲಿ ಭಾರೀ ಬೇಡಿಕೆ ಇದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X