• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ವಿವಾದದ ಸುಳಿಯಲ್ಲಿ ನಾರಾಯಣಮೂರ್ತಿ!

By Staff
|


ಬೆಂಗಳೂರು : ‘ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಸುವುದರಲ್ಲಿ ತಪ್ಪೇನಿಲ್ಲ ’ ಎನ್ನುವ ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆ, ಸಾಹಿತ್ಯವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೆಂಡಕಾರಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ, ನಾರಾಯಣಮೂರ್ತಿಯನ್ನು ‘ಅಮೆರಿಕನ್‌ ಏಜೆಂಟ್‌’ ಎಂದು ಟೀಕಿಸಿದ್ದಾರೆ.

ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಸುವ ಸರ್ಕಾರದ ತೀರ್ಮಾನಕ್ಕೆ ಸಮ್ಮತಿ ಸೂಚಿಸಿರುವ ನಾರಾಯಣಮೂರ್ತಿ ಅವರ ಮನಸ್ಸಿನಲ್ಲಿ ಬೇರೆಯದೇ ಆದ ಲೆಕ್ಕಾಚಾರವಿದೆ. ಅವರ ಅಜೆಂಡಾ ಪ್ರಕಾರ, ಕನ್ನಡ ಶಾಲೆಗಳು ಮುಂದಿನ ದಿನಗಳಲ್ಲಿ ಕಣ್ಮರೆಯಾಗುತ್ತವೆ. ಎಲ್ಲವೂ ಆಂಗ್ಲಮಯವಾಗುತ್ತದೆ. ಸುವರ್ಣ ಕರ್ನಾಟಕದ ಸಂಭ್ರಮದ ಹಿನ್ನೆಲೆ ನಾರಾಯಣಮೂರ್ತಿ ನಮ್ಮ ಮುಂದೆ ಇಂಥದ್ದೊಂದು ಚಿಂತನೆಯನ್ನು ಹರಿಬಿಟ್ಟಿದ್ದಾರೆ ಎಂದು ಗೇಲಿ ಮಾಡಿದರು.

ಮೆರಿಟ್‌ ಎನ್ನುವುದು ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಯುವುದರಿಂದ ಬರುವುದಿಲ್ಲ. ನಾರಾಯಣಮೂರ್ತಿ ಅವರ ಜಗತ್ತಿನಲ್ಲಿ ಮೀಸಲಾತಿ, ಸಾಮಾಜಿಕ ನ್ಯಾಯಗಳಿಗೆ ಜಾಗವಿಲ್ಲ ಎಂದ ಚಂಪಾ, ಕುವೆಂಪು ಅವರ ಕನಸುಗಳನ್ನು ಯಾರು ಅರ್ಥಮಾಡಿಕೊಂಡಿಲ್ಲ. ಇಂಗ್ಲಿಷ್‌ ಕಲಿಕೆಗೆ ಜೈ ಎನ್ನುತ್ತಿರುವ ದಲಿತ ಸಾಹಿತ್ಯದ ಪ್ರಮುಖರಾದ ಕೆ.ಬಿ.ಸಿದ್ದಯ್ಯ, ಬಿ.ಎಂ.ಪುಟ್ಟಯ್ಯ, ದೇವನೂರು ಮಹಾದೇವ, ಸಿದ್ದಲಿಂಗಯ್ಯ ಅವರಿಗೆ ಭವಿಷ್ಯದಲ್ಲಿನ ದುರಂತದ ಬಗ್ಗೆ ಎಚ್ಚರವಿಲ್ಲ ಎಂದು ನೊಂದು ನುಡಿದರು.

ಬಿರುಕು : ಕನ್ನಡ ಸಾಹಿತ್ಯವಲಯದಲ್ಲಿನ ಗುಂಪುಗಾರಿಕೆ, ಸರ್ಕಾರದ ಭಾಷಾ ನೀತಿ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ. ಚಂಪಾ, ಬರಗೂರು ರಾಮಚಂದ್ರಪ್ಪ, ಸಿ.ಎಸ್‌.ಸಿದ್ಧಲಿಂಗಯ್ಯ, ಎಲ್‌.ಎಸ್‌.ಶೇಷಗಿರಿರಾವ್‌ ಮತ್ತಿತರ ಸಾಹಿತಿಗಳು ಇಂಗ್ಲಿಷ್‌ ಕಲಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಲೇಖಕರಾದ ಪ್ರೊ.ಕಿ.ರಂ.ನಾಗರಾಜು, ನಟರಾಜ್‌ ಹುಳಿಯಾರ್‌, ಜಿ.ಕೆ.ಗೋವಿಂದ ರಾವ್‌, ರೈತ ಚಳವಳಿಯ ಪುಟ್ಟಣ್ಣಯ್ಯ, ದಲಿತ ಸಂಘಟನೆಯ ವಿವಿಧ ಮುಖಂಡರು ಸರ್ಕಾರದ ಭಾಷಾ ನೀತಿಯನ್ನು ಸಮರ್ಥಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more