ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್‌ವೇರ್‌ ಮಹಾರಾಜ ಇನ್ಫೋಸಿಸ್‌ಗೆ ಇನ್ನೊಂದು ಗರಿ

By Staff
|
Google Oneindia Kannada News

ಬೆಂಗಳೂರು : ತನ್ನ ಸಂಸ್ಥೆಯಲ್ಲಿ 148 ವೃತ್ತಿಪರರು ಟಿಓಜಿಎಎಫ್‌(ದಿ ಓಪನ್‌ ಗ್ರೂಪ್‌ ಆರ್ಕಿಟೆಕ್ಚರ್‌ ಫ್ರೇಮ್‌ವರ್ಕ್‌) ಪ್ರಮಾಣಪತ್ರ ಪಡೆದವರಿದ್ದಾರೆ ಎಂದು ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ ಬುಧವಾರ ಹೇಳಿಕೊಂಡಿದೆ.

ಸಂಸ್ಥೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಟಿಓಜಿಎಎಫ್‌ ಪ್ರಮಾಣಪತ್ರ ಪಡೆದ ವೃತ್ತಿಪರರನ್ನು ಹೊಂದಿದ ಖ್ಯಾತಿ ಸಂಸ್ಥೆಗೆ ಲಭಿಸಿದೆ ಎಂದು ಇನ್ಫೋಸಿಸ್‌ ಸ್ಪಷ್ಟಪಡಿಸಿದೆ.

ದಿ ಓಪನ್‌ ಗ್ರೂಪ್‌ ಎಂಬುದು, ಮಾಹಿತಿ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮುಕ್ತ ಗುಣಮಟ್ಟ ಹಾಗೂ ಜಾಗತಿಕ ಅಂತರ್‌ಚಾಲನಾಯೋಗ್ಯತೆಯತ್ತ ಗಮನ ಹರಿಸುವ ಸಂಸ್ಥೆಯಾಗಿದೆ. ಸಂಸ್ಥೆಯಾಂದರ ಆಂತರಿಕ ಮತ್ತು ಸಂಸ್ಥೆ- ಸಂಸ್ಥೆಗಳ ನಡುವಿನ ವ್ಯವಹಾರಕ್ಕೆ ಬೇಕಾದ ಅಗತ್ಯವನ್ನು ಈ ಸಂಸ್ಥೆ ಪೂರೈಸುತ್ತದೆ.

ಲಾಭ ಹೆಚ್ಚಳ : ಐಟಿ ದಿಗ್ಗಜ ಇನ್ಫೋಸಿಸ್‌ ಟೆಕ್ನಾಲಜಿ ಲಿಮಿಟೆಡ್‌ ಬುಧವಾರ ಎರಡನೇ ತ್ರೆೃಮಾಸಿಕ ವರದಿ ಪ್ರಕಟಿಸಿದ್ದು, ಶೇ.51.35ರಷ್ಟು ನಿವ್ವಳ ಲಾಭ ಹೆಚ್ಚಾಗಿದೆ.

ಸೆ.30ಕ್ಕೆ ಕೊನೆಯಾದ ತ್ರೆೃಮಾಸಿಕದಲ್ಲಿ ತೆರಿಗೆ ಮತ್ತಿತರ ಖರ್ಚುಗಳನ್ನು ಹೊರತುಪಡಿಸಿದಂತೆ 8.96 ಬಿಲಿಯನ್‌ ಲಾಭದೊರೆತಿದೆ(ಕಳೆದ ತ್ರೆೃಮಾಸಿಕದಲ್ಲಿ 5.92ಬಿಲಿಯನ್‌) ಎಂದು ಇನ್ಫೋಸಿಸ್‌ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ನಂದನ್‌ ಎಂ.ನಿಲೇಕಣಿ ತಿಳಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X