ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಲ್ಲೇ ಬಡ್ಡಿ!: ಅಂಚೆ ಇಲಾಖೆಯಿಂದ ಇಸಿಎಸ್‌ ಸೇವೆ

By Staff
|
Google Oneindia Kannada News

ಬೆಂಗಳೂರು : ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿರುವ ಹಣದ ಮೇಲಿನ ಬಡ್ಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ‘ಇಸಿಎಸ್‌’(electronic clearance service) ಸೇವೆಗೆ ಅಂಚೆ ಇಲಾಖೆ ಚಾಲನೆ ನೀಡಿದೆ.

ವಿಶ್ವ ಅಂಚೆ ದಿನಾಚರಣೆ ಅಂಗವಾಗಿ ಬೆಂಗಳೂರಿನ ಜನರಲ್‌ ಪೋಸ್ಟ್‌ ಆಫೀಸಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಮೀರಾ ದತ್ತ ಅವರು, ಈ ಹೊಸ ಯೋಜನೆಯನ್ನು ಉದ್ಘಾಟಿಸಿದರು.

ಸಾಮಾನ್ಯವಾಗಿ ಹಿಂದಿನ ಕಾಲದವರಿಗೆ ಅಂಚೆ ಕಚೇರಿಯ ದೃಢತೆ ಬಗ್ಗೆ ನಂಬಿಕೆ ಜಾಸ್ತಿ. ನಾಕಾಣೆ ಬಡ್ಡಿ ಕಡಿಮೆ ಬಂದರೂ ಚಿಂತೆಯಿಲ್ಲ, ಪೋಸ್ಟ್‌ ಆಫೀಸ್‌ ಓಡಿಹೋಗುವುದಿಲ್ಲ ಎನ್ನುವ ವಿಶ್ವಾಸ. ಅಂಥವರಿಗೆ ಇಸಿಎಸ್‌ ಯೋಜನೆಯಿಂದ ಅನುಕೂಲವಾಗುತ್ತದೆ. ಕಚೇರಿಯಿಂದ ಬಡ್ಡಿ ಬಿಡಿಸಿಕೊಂಡು ಬರಲು ಪ್ರತೀ ತಿಂಗಳು ಅಲ್ಲೀತನಕ ಹೋಗಬೇಕಾಗಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X