ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಿಂದ ಬೆಂಗಳೂರು ಆಗಲಿರುವ ಬ್ಯಾಂಗಲೋರ್‌

By Staff
|
Google Oneindia Kannada News

ಕನ್ನಡೀಕರಣಗೊಳ್ಳುವ ನಗರ-ಪಟ್ಟಣಗಳ ಪಟ್ಟಿ ಸಿದ್ಧ, ರಾಜ್ಯೋತ್ಸವದಿಂದ ನಿಜನಾಮ

ಬೆಂಗಳೂರು : ಮುಂಬರುವ ರಾಜ್ಯೋತ್ಸವ ದಿನ(ನವೆಂಬರ್‌ 1)ದಿಂದ ಬ್ಯಾಂಗಲೋರ್‌ ಬೆಂಗಳೂರು ಎಂದು ಬದಲಾಗಲಿದೆ.

ಸುವರ್ಣ ಕರ್ನಾಟಕ ಆಚರಣೆ ಕುರಿತು ಶನಿವಾರ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೃಹಸಚಿವ ಎಂ.ಪಿ.ಪ್ರಕಾಶ್‌ ಈ ವಿಷಯ ತಿಳಿಸಿದರು.

ಬೆಂಗಳೂರು ಮಾತ್ರವಲ್ಲದೆ ಇಂಗ್ಲಿಷ್‌ನಿಂದ ಅಪಭ್ರಂಶಗೊಂಡಿರುವ ರಾಜ್ಯದ ಇತರ ನಗರಗಳು ಹಾಗೂ ಪಟ್ಟಣಗಳ ಹೆಸರುಗಳನ್ನು ಕನ್ನಡೀಕರಿಸಲಾಗುವುದು. ಆ ಮೂಲಕ ನವೆಂಬರ್‌ 1ರಿಂದ ಮೂಲರೂಪದಲ್ಲಿ ಗುರುತಿಸಲಾಗುವುದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನ ಡೀಕರಣಗೊಳ್ಳುವ ನಗರ ಹಾಗೂ ಪಟ್ಟಣಗಳ ಪಟ್ಟಿ ಸಿದ್ಧಪಡಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X