• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾಕ್ಕೆ ಹಾರುವುದೀಗ ಸಲೀಸು -ಫ್ರೆಡರಿಕ್‌ ಕಪ್ಲಾನ್‌

By Staff
|


ಭಾರತೀಯ ವಿದ್ಯಾಭವನದಲ್ಲಿ ‘ಅಮೆರಿಕನ್‌ ಕಾರ್ನರ್‌’ನ ಎರಡನೇ ವಾರ್ಷಿಕೋತ್ಸವ

ಬೆಂಗಳೂರು : ‘ವಿದ್ಯಾಭ್ಯಾಸ ಮುಂದುವರೆಸಲು ಅಮೆರಿಕಾಗೆ ಹೋಗಬಯಸುವ ಭಾರತೀಯ ಯುವಜನತೆಗೆ ಹೆಚ್ಚು ಪ್ರಮಾಣದಲ್ಲಿ ವೀಸಾ ಕೊಡುವ ಆಲೋಚನೆಯನ್ನು ಅಮೆರಿಕಾ ಸರಕಾರ ಮಾಡುತ್ತಿದೆ’.

--ಅಮೆರಿಕನ್‌ ಕನ್ಸುಲೇಟ್‌ನ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಫ್ರೆಡರಿಕ್‌ ಕಪ್ಲಾನ್‌, ನಗರದಲ್ಲಿ ಈ ಇಂಗಿತ ನೀಡಿದರು. ಭಾರತೀಯ ವಿದ್ಯಾಭವನ ಕೇಂದ್ರದಲ್ಲಿರುವ ‘ಅಮೆರಿಕನ್‌ ಕಾರ್ನರ್‌’ನ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಮೆರಿಕಾಗೆ ಪ್ರವಾಸಕೈಗೊಳ್ಳುವ ಮತ್ತು ಅಮೆರಿಕಾದೊಂದಿದೆ ವಾಣಿಜ್ಯ ವ್ಯವಹಾರಗಳಲ್ಲಿ ಆಸಕ್ತಿಯಿರುವ ಎಲ್ಲರಿಗೂ ‘ಅಮೆರಿಕನ್‌ ಕಾರ್ನರ್‌’ ಉಪಯುಕ್ತ ಮಾಹಿತಿ ನೀಡುತ್ತಿದೆ ಎಂದು ಕಪ್ಲಾನ್‌ ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾಭವನದ ಆಡಳಿತ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಅವರು ಮಾತನಾಡಿ, ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರತದ ಸುಮಾರು 80.000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಆ ದೇಶದಲ್ಲಿ ವಿದ್ಯಾಭವನದ ಶಾಖೆಗಳು ಹಾಗು ಅವುಗಳ ಕಾರ್ಯಚಟುವಟಿಕೆಗಳ ಬಗೆಗೆ ವಿವರ ನೀಡಿದರು.

ವಿದ್ಯಾಭವನದ ಅಧ್ಯಕ್ಷ ಎನ್‌. ರಾಮಾನುಜ ಅವರು ಭವನದ ಅನೇಕ ಪ್ರಯೋಜನಗಳನ್ನು ವಿವರಿಸಿದರು. ಅಮೆರಿಕಾ ಬಗ್ಗೆ ತಿಳಿಯಬಯಸುವ ವಿದ್ಯಾರ್ಥಿಗಳಿಗೆ ‘ಅಮೆರಿಕನ್‌ ಕಾರ್ನರ್‌’ ಅತ್ಯಂತ ಉಪಯುಕ್ತ ತಾಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕಾದ ವಿಶ್ವವಿದ್ಯಾಲಯಗಳು, ಅಧ್ಯಯನ ವಿಷಯಗಳು ಮತ್ತು ಪ್ರವೇಶ ನಿಯಮಗಳನ್ನು ತಿಳಿಯುವುದಕ್ಕಾಗೆ ಬೆಂಗಳೂರು ಮಾತ್ರವಲ್ಲದೆ ಮೈಸೂರಿನಿಂದಲೂ ವಿದ್ಯಾರ್ಥಿಗಳು ಭವನಕ್ಕೆ ಆಗಮಿಸುತ್ತಾರೆ ಎಂದು ರಾಮಾನುಜ ತಿಳಿಸಿದರು.

‘ಅಮೆರಿಕನ್‌ ಕಾರ್ನರ್‌’ನ ಸಂಯೋಜನಾಧಿಕಾರಿ ವಿ. ಮುರಳೀಧರ್‌ ಅವರು ಕಾರ್ನರ್‌ನ ವಿವಿಧ ಚಟುವಟಿಕೆಗಳನ್ನು ಸಭೆಗೆ ಪರಿಚಯಿಸಿದರು.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more