ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಆಇಈ ಜೊತೆ ಎಬಿಸಿಡಿ ಕಲಿಕೆ ಕಡ್ಡಾಯ-: ಸಂಪುಟ ಒಪ್ಪಿಗೆ

By Staff
|
Google Oneindia Kannada News

ಮುಂದಿನ ವರ್ಷದಿಂದ ಇಂಗ್ಲಿಷ್‌ ಕಲಿಸಲು ಸಂಪುಟದ ಸಮ್ಮತಿ -ಹೊರಟ್ಟಿ.

ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲಭಾಷೆಯನ್ನು ಕಲಿಸಲು, ರಾಜ್ಯ ಸಚಿವ ಸಂಪುಟ ಶನಿವಾರ ಅಂಗೀಕಾರ ನೀಡಿದೆ.

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಈ ಬಗ್ಗೆ , ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಬಸವರಾಜ ಹೊರಟ್ಟಿ ಮಾತನಾಡಿದರು. ಸಂಪುಟದ ತೀರ್ಮಾನದ ಪ್ರಕಾರ, ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಕಲಿಕೆ ಜಾರಿಗೆ ಬರಲಿದೆ. ಅದೇ ರೀತಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕಾಗುತ್ತದೆ ಎಂದರು.

ಕನ್ನಡ ಕಲಿಕೆ ಕಡ್ಡಾಯ. ಆದರೆ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಮೂರನೇ ತರಗತಿಯಿಂದ, ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದಬಹುದು ಎಂದು ಸಚಿವ ಹೊರಟ್ಟಿ ಹೇಳಿದರು.

ವಿರೋಧ : ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ, ಅನೇಕ ಅಪಸ್ವರಗಳ ನಡುವೆಯೇ ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್‌ ಸೇರಿಸಿದೆ. ಸುವರ್ಣ ಕರ್ನಾಟಕಕ್ಕೆ ಈ ಸರ್ಕಾರ ಒಳ್ಳೆಯ ಕೊಡುಗೆಯನ್ನೇ ನೀಡಲು ಮುಂದಾಗಿದೆ ಎಂದು ಕನ್ನಡ ಪರ ಸಂಘಟನೆಗಳು ದೂರಿವೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X