ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರೀಗ ‘ಆತ್ಮಹತ್ಯೆ’ ನಗರಿ! ರಾಜ್ಯಕ್ಕೆ 3ನೇ ಸ್ಥಾನ!!

By Staff
|
Google Oneindia Kannada News

ಬೆಂಗಳೂರೀಗ ‘ಆತ್ಮಹತ್ಯೆ’ ನಗರಿ! ರಾಜ್ಯಕ್ಕೆ 3ನೇ ಸ್ಥಾನ!!
ಕೇರಳ ಮತ್ತು ಮಹಾರಾಷ್ಟ್ರಕ್ಕೆ 1ಮತ್ತು 2ನೇ ಸ್ಥಾನದ ಕುಖ್ಯಾತಿ

ಬೆಂಗಳೂರು : ಅತಿ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳಲ್ಲಿ, ಕರ್ನಾಟಕಕ್ಕೆ ಮೂರನೇ ಸ್ಥಾನ! ಈ ಕುಖ್ಯಾತಿಯ ವಿಷಯವನ್ನು ನಿಮಾನ್ಸ್‌ನ ಫಿಡಿಮಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಜಿ.ಗುರುರಾಜ್‌ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು, ಕೇರಳ ಮತ್ತು ಮಹಾರಾಷ್ಟ್ರಗಳು ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಆತ್ಮಹತ್ಯೆಗಳು ಜಾಗತೀಕರಣದ ಪರಿಣಾಮ ಹೆಚ್ಚುತ್ತಿವೆ. ಒತ್ತಡವನ್ನು ವ್ಯವಸ್ಥಿತವಾಗಿ ನಿಬಾಯಿಸಲಾಗದ ವ್ಯಕ್ತಿ ಸಾವಿಗೆ ಶರಣಾಗುತ್ತಾನೆ. ಇದನ್ನು ತಪ್ಪಿಸಲು ಸಮಾಜ ಮುಂದಾಗಬೇಕು ಎಂದರು.

ಬೆಂಗಳೂರಿನಲ್ಲಿ ವರ್ಷಕ್ಕೆ 1500ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಇತರ ಮಹಾನಗರಗಳನ್ನು ಬೆಂಗಳೂರು ಹಿಂದಕ್ಕೆ ಹಾಕಿದೆ ಎಂದು ಗುರುರಾಜ್‌ ಆತಂಕ ವ್ಯಕ್ತಪಡಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X