ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೆಗಾಂವ್‌ ಸ್ಫೋಟ : ಕರ್ನಾಟಕದಲ್ಲಿ ಭಾರೀ ಕಟ್ಟೆಚ್ಚರ

By Staff
|
Google Oneindia Kannada News

ಮಾಲೆಗಾಂವ್‌ ಸ್ಫೋಟ : ಕರ್ನಾಟಕದಲ್ಲಿ ಭಾರೀ ಕಟ್ಟೆಚ್ಚರ
ಮೃತರ ಸಂಖ್ಯೆ 40ಕ್ಕೆ ಹೆಚ್ಚಳ, ಗಾಯಗೊಂಡ 189ಮಂದಿಗೆ ಚಿಕಿತ್ಸೆ

ಬೆಂಗಳೂರು : ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಬಾಂಬ್‌ ಸ್ಫೋಟದ ಹಿನ್ನೆಲೆ, ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ರಾಜಧಾನಿ ನಗರ ಸೇರಿದಂತೆ ವಿವಿಧ ಪ್ರಮುಖ ನಗರಗಳ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ನಿಗಾವಹಿಸಲಾಗಿದೆ. ಪೊಲೀಸರು ಸೂಕ್ಷ್ಮಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಲೆಗಾಂವ್‌ ವರದಿ : ಬಾಂಬ್‌ ಸ್ಫೋಟದ ಭೀಕರ ಘಟನೆ, ಇಲ್ಲಿನ ಜನರಲ್ಲಿ ಆತಂಕ ಹುಟ್ಟಿಸಿದೆ. ಶನಿವಾರ(ಸೆ.9) ಈ ಭಾಗದಲ್ಲಿ ಕಪ್ಯೂ ವಿಧಿಸಲಾಗಿದೆ. ಪೊಲೀಸರ ಬಿಗಿ ಭದ್ರತೆ ನಡುವೆ ಎಂದಿನಂತೆ ಮುಸ್ಲಿಂಮರು ಮಾಲೆಗಾಂವ್‌ ಮಸೀದಿ ಬಳಿ ಪ್ರಾರ್ಥನೆ ಸಲ್ಲಿಸಿದರು.

ಶವಗಳನ್ನು ಗುರ್ತಿಸಿ, ಸಂಸ್ಕಾರಕ್ಕಾಗಿ ಸಂಬಂಧಿಸದವರಿಗೆ ಒಪ್ಪಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ಶಿವರಾಜ ಪಾಟೀಲ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮಾಲೆಗಾಂವ್‌ಗೆ ಆಗಮಿಸುವ ನಿರೀಕ್ಷೆ ಇದೆ.

ದುರಂತದ ವಿವರ : ಮುಂಬಯಿ ಸರಣಿ ಬಾಂಬ್‌ ಸ್ಫೋಟ(ಜು. 11ರಂದು ರೈಲು ಸ್ಫೋಟದಲ್ಲಿ 200 ಬಲಿಯಾಗಿದ್ದರು. )ದ ಘಟನೆ ಮಾಸುವ ಮುನ್ನವೇ, ನಾಸಿಕ್‌ ಜಿಲ್ಲೆಯ ಮಾಲೆಗಾಂವ್‌ ಪಟ್ಟಣದಲ್ಲಿ ಉಗ್ರರು ತಮ್ಮ ಕೃತ್ಯವನ್ನು ಮುಂದುವರೆಸಿದ್ದಾರೆ.

ಸೂಕ್ಷ್ಮ ಪ್ರದೇಶ ಎಂದು ಗುರ್ತಿಸಲಾಗುವ ಮಲೆಗಾಂವ್‌ನ ಮಸೀದಿ ಬಳಿ ನೂರಾರು ಮುಸ್ಲಿಂರು ಪ್ರಾರ್ಥನೆಗಾಗಿ ಶುಕ್ರವಾರ ಸೇರಿದ್ದರು. ಮಧ್ಯಾಹ್ನ 1.50ರ ಸುಮಾರಿನಲ್ಲಿ ಮೂರು ಕಡೆ ಬಾಂಬ್‌ ಸ್ಫೋಟಿಸಿವೆ. ಈ ದುರಂತದಲ್ಲಿ 40ಮಂದಿ ಮೃತಪಟ್ಟಿದ್ದು, 189ಮಂದಿ ಗಾಯಗೊಂಡಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X