ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ, ರಾಜ್ಯ ನೌಕರರಿಗೆ?

By Staff
|
Google Oneindia Kannada News

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ, ರಾಜ್ಯ ನೌಕರರಿಗೆ?
ನೌಕರರಿಗೆ ತುಟ್ಟಿ ಭತ್ಯೆ : ಕೇಂದ್ರಕ್ಕೆ 1880 ಕೋಟಿ ಹೊರೆ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಶೇ.5ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗಿದ್ದು, ಜು.1ರಿಂದ ಹೆಚ್ಚಳ ಅನ್ವಯವಾಗಲಿದೆ. ಈ ಪರಿಣಾಮ ಕೇಂದ್ರ ಬೊಕ್ಕಸಕ್ಕೆ 1889 ಕೋಟಿ ರೂ.ಗಳ ಹೊರೆ ಬೀಳಲಿದೆ.

ಸರ್ಕಾರದ ಈ ನಿರ್ಧಾರದಿಂದ ಹತ್ತು ಲಕ್ಷಕ್ಕೂ ಅಧಿಕ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರದ ಕ್ರಮವನ್ನು ನೌಕರರ ಸಂಘ ಸ್ವಾಗತಿಸಿದೆ.

ಕರ್ನಾಟಕ ರಾಜ್ಯ ನೌಕರರ ಅಳಲು : ಕೇಂದ್ರ ನೌಕರರ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಹೆಚ್ಚಳ ಕಾಲಕಾಲಕ್ಕೆ ನಡೆಯುತ್ತಿದೆ. ಆದರೆ ನಮ್ಮ ವೇತನ ಪರಿಷ್ಕರಣೆಯತ್ತ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ ಎಂಬ ಅಸಮಾಧಾನ ರಾಜ್ಯ ಸರ್ಕಾರಿ ನೌಕರರಲ್ಲಿದೆ. ವೇತನ ತಾರತಮ್ಯ ಇಲ್ಲವಾಗಿಸಬೇಕೆಂದು ರಾಜ್ಯಸರ್ಕಾರವನ್ನು ನೌಕರರು ಒತ್ತಾಯಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X