ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ-ರಾಜಕಾರಣಿ ಶಬಾನಾ ಆಜ್ಮಿಗೆ ಬಸವಶ್ರೀ ಪುರಸ್ಕಾರ

By Staff
|
Google Oneindia Kannada News

ನಟಿ-ರಾಜಕಾರಣಿ ಶಬಾನಾ ಆಜ್ಮಿಗೆ ಬಸವಶ್ರೀ ಪುರಸ್ಕಾರ
ಸಮಾಜಸೇವೆಗೆ ಸಂದ ಪುರಸ್ಕಾರ, ಅಕ್ಟೋಬರ್‌ 3ರಂದು ಪ್ರದಾನ

ಚಿತ್ರದುರ್ಗ : ಪ್ರಸಕ್ತ ಸಾಲಿನ ಬಸವಶ್ರೀ ಪ್ರಶಸ್ತಿ ಬಹುಭಾಷಾ ಚಿತ್ರನಟಿ, ಸಮಾಜಸೇವಕಿ ಹಾಗೂ ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಪಾಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಶಬಾನಾ ಆಜ್ಮಿ ತಮ್ಮನ್ನು ಸಿನಿಮಾ ವೃತ್ತಿಗಷ್ಟೇ ಸೀಮಿತಗೊಳಿಸಿಕೊಳ್ಳದೆ ಶೋಷಿತರ, ಸಂತ್ರಸ್ತರ, ಏಯ್ಡ್ಸ್‌ ಪೀಡಿತರ ನೆಮ್ಮದಿಗಾಗಿ ದುಡಿಯುತ್ತಿದ್ದಾರೆ. ಅವರ ಸಾಮಾಜಿಕ ಕಾಳಜಿ ಗುರುತಿಸಿ ಮಠ ಈ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಹೇಳಿದರು.

ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು, ಪ್ರಮಾಣಪತ್ರ ಹಾಗೂ ಫಲಕ ಒಳಗೊಂಡಿದೆ. ಅಕ್ಟೋಬರ್‌ 3ರಂದು ಮುರುಘಾಮಠದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X