ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ, ಪ್ರವಾಸೋದ್ಯಮ ವೆಬ್‌ಸೈಟ್‌ ಲೋಕಾರ್ಪಣೆ

By Staff
|
Google Oneindia Kannada News

ದಸರಾ, ಪ್ರವಾಸೋದ್ಯಮ ವೆಬ್‌ಸೈಟ್‌ ಲೋಕಾರ್ಪಣೆ
ದಸರಾ ಸಡಗರದಲ್ಲಿ ಮೈಸೂರು, ಮಾಹಿತಿ ಕೇಂದ್ರ ಕಾರ್ಯಾರಂಭ

ಮೈಸೂರು : ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಂದ್ರವನ್ನು ನಗರಸಭೆಯಲ್ಲಿ ಆರಂಭಿಸಲಾಗಿದೆ. ಅಲ್ಲದೇ ದಸರಾ ಉತ್ಸವ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎರಡು ವೆಬ್‌ಸೈಟ್‌ಗಳು ಸೇವೆ ಆರಂಭಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಟಿ.ಜಯಕುಮರ್‌, ಮಾಹಿತಿ ಕೇಂದ್ರದಲ್ಲಿ www.mysoredasara.com ಮತ್ತು www.karnatakatourism.comನ್ನು ಲೋಕಾರ್ಪಣೆ ಮಾಡಿದರು. ದಸರಾ ಕಾರ್ಯಕ್ರಮಗಳು, ಮೈಸೂರಿನ ಹೋಟೆಲ್‌ಗಳು, ಅತಿಥಿ ಗೃಹಗಳು, ಪ್ರವಾಸಿ ಕೇಂದ್ರಗಳು, ರೈಲ್ವೆ ಸಮಯ, ಬಸ್‌ ಸಮಯ ಮತ್ತಿತರ ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯ.

ದಸರಾಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಪರ್ಕಿಸಬೇಕಾದ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆಗಳು ಹೀಗಿವೆ -0821-3203888, 3205888, 2418888.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X