ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಶಿಕ್ಷಕರ ನಿವೃತ್ತಿ ವಯಸ್ಸು 60ರಿಂದ 62ಕ್ಕೆ ಹೆಚ್ಚಳ

By Staff
|
Google Oneindia Kannada News

ದೆಹಲಿ ಶಿಕ್ಷಕರ ನಿವೃತ್ತಿ ವಯಸ್ಸು 60ರಿಂದ 62ಕ್ಕೆ ಹೆಚ್ಚಳ
ಶಿಕ್ಷಕರ ದಿನಾಚರಣೆ ಹಿನ್ನೆಲೆ ಸಂಪುಟದಿಂದ ಮಹತ್ವದ ನಿರ್ಧಾರ

ಬೆಂಗಳೂರು : ಈ ಸಲದ ಶಿಕ್ಷಕರ ದಿನಾಚರಣೆಗೆ ದೆಹಲಿ ಸರ್ಕಾರ, ವಿಶೇಷ ಕೊಡುಗೆ ನೀಡಿದೆ. ಶಿಕ್ಷಕರ ನಿವೃತ್ತಿ ವಯಸ್ಸನ್ನು ಅದು 60ರಿಂದ 62ಕ್ಕೆ ಹೆಚ್ಚಳ ಮಾಡಿದೆ.

ಸಂಪುಟ ಸಭೆ ನಂತರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಿಕ್ಷಣ ಸಚಿವ ಅರವಿಂದರ್‌ ಸಿಂಗ್‌, ಸರ್ಕಾರದ ನಿರ್ಧಾರದಿಂದ ದೆಹಲಿಯ 40ಸಾವಿರ ಶಿಕ್ಷಕರಿಗೆ ಅನುಕೂಲವಾಗಲಿದೆ. ಮುಂದೆ ಶಿಕ್ಷಕರ ಕೊರತೆ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಶಿಕ್ಷಕರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದರಿಂದ ಅನುಭವಿ ಶಿಕ್ಷಕರ ಸೇವೆ ಮುಂದುವರೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭ್ಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X