ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಐದು ಲಕ್ಷ ಮಂದಿಗೆ ಎಚ್‌ಐವಿ ಸೋಂಕು!!

By Staff
|
Google Oneindia Kannada News

ಕರ್ನಾಟಕದ ಐದು ಲಕ್ಷ ಮಂದಿಗೆ ಎಚ್‌ಐವಿ ಸೋಂಕು!!
ದೇಶದಲ್ಲಿ ಐದನೇ ಸ್ಥಾನ, ಅಸುರಕ್ಷಿತ ಲೈಂಗಿಕತೆ ಪ್ರಮಾಣವೇ ಹೆಚ್ಚು

ಬೆಂಗಳೂರು : ರಾಜ್ಯಾದ್ಯಂತ ಐದು ಲಕ್ಷಕ್ಕೂ ಅಧಿಕ ಜನ ಎಚ್‌ಐವಿ ಸೋಂಕಿಗೀಡಾಗಿದ್ದಾರೆ ಎಂದು ರಾಜ್ಯ ಏಯ್ಡ್ಸ್‌ ನಿರ್ಮೂಲನಾ ಸಂಸ್ಥೆ ಯೋಜನಾ ನಿರ್ದೇಶಕ ಕೆ.ಎಸ್‌.ಶಶಿಧರ್‌ ಹೇಳಿದ್ದಾರೆ.

ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ರಾಜ್ಯ ಏಯ್ಡ್ಸ್‌ ನಿರ್ಮೂಲನಾ ಸಂಸ್ಥೆ ಏರ್ಪಡಿಸಿದ್ದ, ಏಯ್ಡ್ಸ್‌ ಜಾಗೃತಿ ಕುರಿತ ಯುವ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಪ್ರತಿ 1000ಜನರ ಪೈಕಿ 16ಮಂದಿಗೆ ಎಚ್‌ಐವಿ/ಏಯ್ಡ್ಸ್‌ ಸೋಂಕಿದೆ. ಶೇಕಡಾ 30ರಷ್ಟು ಸೋಂಕಿತರು 15ರಿಂದ 25ವರ್ಷದೊಳಗಿನವರಾಗಿದ್ದಾರೆ. ಶೇಕಡಾ 87ರಷ್ಟು ಜನ ಅಸುರಕ್ಷಿತ ಲೈಂಗಿಕತೆಯಿಂದ ಸೋಂಕು ತಗುಲಿಸಿಕೊಂಡಿದ್ದಾರೆ. ದೇಶದ ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ ರಾಜ್ಯ ಐದನೇ ಸ್ಥಾನದಲ್ಲಿರುವುದು ಕಳವಳಕಾರಿ ಅಂಶ ಎಂದು ವಿಷಾದಿಸಿದರು.

ರಾಜ್ಯದ ಯಾವುದೇ ಜಿಲ್ಲೆಯೂ ಎಚ್‌ಐವಿಯಿಂದ ಮುಕ್ತವಾಗಿಲ್ಲ. ಹಾಗಾಗಿ ಈ ಸೋಂಕು ತಗುಲದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ರಾಜ್ಯ ಏಯ್ಡ್ಸ್‌ ನಿರ್ಮೂಲನಾ ಸಂಸ್ಥೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X