ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಗಣೇಶಪ್ಪನ ಸಡಗರ ಮತ್ತು ಬಿಗಿಭದ್ರತೆ

By Staff
|
Google Oneindia Kannada News

ಬೆಳಗಾವಿಯಲ್ಲಿ ಗಣೇಶಪ್ಪನ ಸಡಗರ ಮತ್ತು ಬಿಗಿಭದ್ರತೆ
344 ಕಡೆ ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ, ಲಕ್ಷಾಂತರ ಮಂದಿ ವೀಕ್ಷಣೆ

ಬೆಳಗಾವಿ : ಗಣೇಶೋತ್ಸವ ಆಚರಣೆಗೆ ನಾಡಿನಲ್ಲೇ ವಿಶಿಷ್ಟ ಖ್ಯಾತಿ ಹೊಂದಿರುವ ನಗರದಲ್ಲಿ ದಿನೇ ದಿನೇ ಸಡಗರ ಹೆಚ್ಚುತ್ತಿದ್ದು, ಸುರಕ್ಷತಾ ದೃಷ್ಟಿಯಿಂದ ವ್ಯಾಪಕ ಬಂದೋಬಸ್ತ್‌ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿ ಪ್ರತಿ ವರ್ಷ ಗಣೇಶೋತ್ಸವವನ್ನು 11ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದು ಒಂದೆಡೆಯಾದರೆ, ಸಾರ್ವಜನಿಕವಾಗಿ ನೂರಾರು ಕಡೆ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ಪ್ರತಿಷ್ಠಾಪಿಸಲಾದ ಸಾರ್ವಜನಿಕ ಗಣೇಶ ವಿಗ್ರಹಗಳ ಒಟ್ಟು ಸಂಖ್ಯೆ 344.

ಗಣೇಶೋತ್ಸವ ನೋಡಲು ಬರುವವರ ಸಂಖ್ಯೆಹೆಚ್ಚುತ್ತಿದ್ದು, ಶನಿವಾರ(ಸೆಪ್ಟೆಂಬರ್‌ 2) ಒಂದೇ ದಿನ ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದರು. ರಾತ್ರಿ ಎರಡು ಗಂಟೆಯಾದರೂ ಜನದಟ್ಟಣೆ ಮುಂದುವರಿದಿತ್ತು.

ಸಂಚಾರ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಆದರೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ವ್ಯಾಪಕ ಪೊಲೀಸ್‌ ಭದ್ರತೆ ನಿಯೋಜಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X