ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ಕೈ, ಮಹಾರಾಷ್ಟ್ರಕ್ಕೆ ಜೈ : ಏನಿದು ಮನಮೋಹನ?

By Staff
|
Google Oneindia Kannada News

ನಮಗೆ ಕೈ, ಮಹಾರಾಷ್ಟ್ರಕ್ಕೆ ಜೈ : ಏನಿದು ಮನಮೋಹನ?
ಗಡಿ ತಕರಾರು : ಮಹಾರಾಷ್ಟ್ರದ ಒತ್ತಡ, ಕರ್ನಾಟಕಾದ್ಯಂತ ವ್ಯಾಪಕ ಖಂಡನೆ

ನವದೆಹಲಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಕೇಂದ್ರ ಸರ್ಕಾರ, ಪುನಾ ತನ್ನ ನಿಲುವು ಬಲಿಸಿದ್ದು ಈ ಕುರಿತು ಸಲ್ಲಿಸಿದ್ದ ಅಫಿಡವಿಟ್‌ ವಾಪಸು ಪಡೆದಿದೆ.

‘ಈಗಾಗಲೇ ನಿಮಗೆ ನೀಡಲಾಗಿರುವ ಪ್ರಮಾಣ ಪತ್ರದ ಪ್ರತಿಯನ್ನು ದಯಮಾಡಿ ನಿರ್ಲಕ್ಷಿಸಿ. ತಿದ್ದುಪಡಿಗಳನ್ನು ಒಳಗೊಂಡ ಹೊಸ ಪ್ರಮಾಣ ಪತ್ರ ತಯಾರಾದ ಕೂಡಲೇ ನಿಮಗೆ ತಲುಪಿಸುತ್ತೇವೆ. ತೊಂದರೆಗೆ ಕ್ಷಮೆ ಇರಲಿ.’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರ ರಾಜ್ಯದ ನ್ಯಾಯವಾದಿಗಳ ಕೈ ಸೇರಿದೆ.

ಆಗಸ್ಟ್‌ 24ರಂದು ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವು ಸ್ಪಷ್ಟಪಡಿಸಿದ್ದ ಕೇಂದ್ರ ಸರ್ಕಾರ, ಉಭಯ ರಾಜ್ಯಗಳ ಗಡಿ ಸಮಸ್ಯೆಯನ್ನು ಆಯಾ ರಾಜ್ಯಗಳೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತವೆ. ಈ ವಿಚಾರದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಅಲ್ಲದೆ ಆಗಸ್ಟ್‌ 28ರಂದು ಪ್ರಮಾಣ ಪತ್ರದ ಪ್ರತಿಗಳನ್ನು, ಉಭಯ ರಾಜ್ಯ ಸರ್ಕಾರಗಳ ಸ್ಥಾಯೀ ನ್ಯಾಯವಾದಿಗಳಿಗೆ ನೀಡಿತ್ತು.

ಕೇಂದ್ರದ ಈ ನಿಲುವನ್ನು ಕರ್ನಾಟಕದಲ್ಲಿ ವ್ಯಾಪಕವಾಗಿ ಸ್ವಾಗತಿಸಲಾಗಿತ್ತು. ಆದರೆ ಶುಕ್ರವಾರ ನಡೆದ ದಿಢೀರ್‌ ಬೆಳವಣಿಗೆಯಲ್ಲಿ, ಕೇಂದ್ರ ತಾನೇ ಸಲ್ಲಿಸಿದ್ದ ಪ್ರಮಾಣ ಪತ್ರ ವಾಪಸು ಪಡೆದಿರುವ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿ ಸಮಸ್ಯೆಯನ್ನು ಮತ್ತಷ್ಟು ಉಲ್ಭಣಗೊಳಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.

ಕೇಂದ್ರದ ದ್ವಂದ್ವ ನಿಲುವು ಕರ್ನಾಟಕಾದ್ಯಂತ ಖಂಡನೆಗೊಳಗಾಗಿದ್ದು, ಅದು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯುವ ಮೂಲಕ ಪ್ರಜಾಪ್ರಸತ್ತಾತ್ಮಕ ವ್ಯವಸ್ಥೆಗೆ ಚ್ಯುತಿ ಉಂಟುಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

(ಏಜನ್ಸೀಸ್‌)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X