ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವನಹಳ್ಳಿ ಏರ್‌ಪೋರ್ಟ್‌ ಬಳಿ ಸ್ಫೋಟ : 4 ಸಾವು

By Staff
|
Google Oneindia Kannada News

ದೇವನಹಳ್ಳಿ ಏರ್‌ಪೋರ್ಟ್‌ ಬಳಿ ಸ್ಫೋಟ : 4 ಸಾವು
ಪೊಲೀಸರಿಂದ ತನಿಖೆ, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಂಭವ

ಬೆಂಗಳೂರು : ಜಿಲೆಟಿನ್‌ ಸ್ಫೋಟದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಲ್ವರು ಬಲಿಯಾದ ಘಟನೆ ಗುರುವಾರ(ಆ.31) ವರದಿಯಾಗಿದೆ.

ದೇವನಹಳ್ಳಿಯ ಅಂ.ರಾ.ವಿಮಾನ ನಿಲ್ಧಾಣದ ಸಮೀಪ ವರ್ಕರ್ಸ್‌ ಕಾಲೋನಿಯ ಶೆಡ್‌ವೊಂದರಲ್ಲಿ , ಬುಧವಾರ ರಾತ್ರಿ ಸ್ಫೋಟ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ನಾಡಬಾಂಬ್‌ನಿಂದಲೂ ಈ ದುರಂತ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರನ್ನು ದೇವನಹಳ್ಳಿವಿಮಾನ ನಿಲ್ದಾಣಕ್ಕೆ ತಮಿಳುನಾಡಿನಿಂದ ಕೆಲಸ ಮಾಡಲು ಬಂದಿದ್ದ ಕಾರ್ಮಿಕರು ಎಂದು ಗುರ್ತಿಸಲಾಗಿದೆ. ಸ್ಥಳಕ್ಕೆ ತೆರಳಿರುವ ಉನ್ನತ ಪೊಲೀಸ್‌ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

(ಯುಎನ್‌ಎ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X