ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇರಿಯಮ್ಮನ ಉತ್ಸವ : ಶಿವಾಜಿನಗರದಿ ಟ್ರಾಫಿಕ್‌ ಕಿರಿಕ್‌

By Staff
|
Google Oneindia Kannada News

ಮೇರಿಯಮ್ಮನ ಉತ್ಸವ : ಶಿವಾಜಿನಗರದಿ ಟ್ರಾಫಿಕ್‌ ಕಿರಿಕ್‌
ಸೆ.7ರವರೆಗೆ ಉತ್ಸವ, ಪ್ರತಿದಿನ ವಿಶೇಷ ಕಾರ್ಯಕ್ರಮಗಳು

ಬೆಂಗಳೂರು : ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ, ಆರೋಗ್ಯ ಮಾತೆ ಸಂತ ಮೇರಿಯಮ್ಮನ ವಾರ್ಷಿಕ ಉತ್ಸವ ಆರಂಭಗೊಂಡಿದೆ. ಮುಂದಿನ ಹತ್ತು ದಿನಗಳ ಕಾಲ ಅಂದರೆ ಸೆ.7ರವರೆಗೆ ಉತ್ಸವ ನಡೆಯಲಿದೆ.

ಪ್ರತಿದಿನ ವಿವಿಧ ಕಾರ್ಯಕ್ರಮಗಳು ಇಲ್ಲಿ ನಡೆಯಲಿದ್ದು, ವಿಶೇಷ ಪ್ರಾರ್ಥನೆ ಮತ್ತು ಮೇರಿಯಮ್ಮನ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಲಕ್ಷಾಂತರ ಭಕ್ತರು ಮೇರಿಯಮ್ಮನ ಆಶೀರ್ವಾದಕ್ಕಾಗಿ ಆಗಮಿಸಲಿದ್ದಾರೆ. ಶಿವಾಜಿನಗರ ಮುಂದಿನ ಹತ್ತು ದಿನಗಳ ಕಾಲ ಗಿಜಿಗುಟ್ಟಲಿದೆ.

ಉತ್ಸವದ ಮೊದಲ ದಿನವಾದ ಮಂಗಳವಾರ(ಆ.29) ಸಂಜೆ ಈ ಭಾಗದಲ್ಲಿ ಹಬ್ಬದ ವಾತಾವರಣ ರಂಗೇರಿತ್ತು. ಸಾವಿರಾರು ಜನರು ನೆರೆದಿದ್ದರು. ಹೀಗಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಇದೇ ಪರಿಸ್ಥಿತಿ ಉತ್ಸವ ಮುಗಿಯುವ ತನಕ ಮುಂದುವರೆಯಬಹುದು ಎಂದು ಊಹಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X