ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಂಗಿ ಜಲಾಶಯ ; ಇನ್ನೊಂದು ಕೆಆರ್‌ಎಸ್‌ ಆಗಲಿದೆ!

By Staff
|
Google Oneindia Kannada News

ಹಾರಂಗಿ ಜಲಾಶಯ ; ಇನ್ನೊಂದು ಕೆಆರ್‌ಎಸ್‌ ಆಗಲಿದೆ!
ಏಳು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ.. ಇದು ಗುಂಡೂರಾಯರ ಕನಸು!

ಮಡಿಕೇರಿ : ಮೈಸೂರಿನ ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಜಲಾಶಯದಂತೆ, ಹಾರಂಗಿ ಜಲಾಶಯವನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಏಳು ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದೆ.

ಬೆಂಗಳೂರು ಮೂಲದ ಸುಭಾಷ್‌ ಅಂಡ್‌ ಕಂಪೆನಿಗೆ ಈ ಭಾಗದ ಅಭಿವೃದ್ಧಿಯ ಹೊಣೆ ಒಪ್ಪಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆ ಕಾರ್ಯರೂಪಕ್ಕೆ ಬಂದರೆ ಪ್ರವಾಸಿಗರ ಪಾಲಿಗೆ ಹಾರಂಗಿ ಜಲಾಶಯ, ಮತ್ತೊಂದು ಆಕರ್ಷಣೆಯಾಗಲಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಅಭಿವೃದ್ಧಿ ಯೋಜನೆ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಹಾರಂಗಿ ಜಲಾಶಯದಲ್ಲಿ ವಸತಿ ವ್ಯವಸ್ಥೆ, ಈಜುಕೊಳ, ಸಂಗೀತ ಕಾರಂಜಿ, ಉದ್ಯಾನ ನಿರ್ಮಾಣ ಅಭಿವೃದ್ಧಿ ಯೋಜನೆಯ ಪ್ರಮುಖ ಅಂಶಗಳು. ಈ ಜಲಾಶಯದ ಅಭಿವೃದ್ಧಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್‌.ಗುಂಡೂರಾವ್‌ರ ಕನಸಾಗಿತ್ತು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X