• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್‌ ತಳಮಳ : ರಾಜಿಯಾದ ಕುಮಾರ್‌-ಜಮೀರ್‌

By Staff
|

ಜೆಡಿಎಸ್‌ ತಳಮಳ : ರಾಜಿಯಾದ ಕುಮಾರ್‌-ಜಮೀರ್‌
ಕಟೌಟ್‌ ತೆಗೆದುಹಾಕಿದ್ದರಿಂದ ಮುನಿಸು, ಸದ್ಯಕ್ಕೆ ಭಿನ್ನಮತ ದೂರ

ಬೆಂಗಳೂರು : ಸಚಿವ ಜಮೀರ್‌ ಅಹ್ಮದ್‌ಖಾನ್‌, ಶಾಸಕ ಸಂತೋಷ್‌ ಲಾಡ್‌ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಮನಸ್ತಾಪ ಬಗೆಹರಿದಿದೆ.

ಕೆಲವು ಶಾಸಕರು ಹಾಗೂ ಸಚಿವರ ಮಧ್ಯಸ್ಥಿಕೆಯಲ್ಲಿ, ಶುಕ್ರವಾರ(ಆಗಸ್ಟ್‌ 25) ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ನಡೆದ ಸಭೆಯಲ್ಲಿ, ಲಾಡ್‌ ಹಾಗೂ ಖಾನ್‌ ಇಬ್ಬರೂ ತಾವು ಮುಖ್ಯಮಂತ್ರಿಯಾಂದಿಗೆ ಬೇಸರಗೊಂಡ ಕಾರಣ ಹೊರಗೆಡವಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಹ ಮನಬಿಚ್ಚಿ ಮಾತನಾಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜಮೀರ್‌ ಹುಟ್ಟುಹಬ್ಬದ ಸಂದರ್ಭದಲ್ಲಿ, ನಗರದ ಕೆಲವೆಡೆಗಳಲ್ಲಿ ಅನಧಿಕೃತವಾಗಿ ಕಟೌಟ್‌ ಹಾಕಲಾಗಿತ್ತು. ಮಹಾನಗರಪಾಲಿಕೆ ಸಿಬ್ಬಂದಿ ಕಟೌಟ್‌ಗಳನ್ನು ತೆಗೆದುಹಾಕಿತ್ತು. ಆನಂತರ ಜಮೀರ್‌ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿದಾಗ, ಅನಧಿಕೃತ ಕಟೌಟ್‌ಗಳನ್ನು ತೆಗೆಯಲು ಮುಖ್ಯಮಂತ್ರಿಗಳೇ ಆದೇಶ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹಾಹಾಗಿ ಜಮೀರ್‌ ಮುನಿಸಿಕೊಂಡಿದ್ದರು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಇತ್ತೀಚೆಗೆ ನಡೆದ ಜೆಡಿಎಸ್‌ ಶಾಸಕರ ಸಭೆಗೆ ಇವರಿಬ್ಬರೂ ಗೈರುಹಾಜರಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಮಾತುಕತೆಯಿಂದಾಗಿ ಜೆಡಿಎಸ್‌ನಲ್ಲಿ ಭುಗಿಲೆದ್ದಿದ್ದ ಭಿನ್ನಮತ ಸದ್ಯಕ್ಕೆ ತಿಳಿಯಾಗಿದ್ದು, ಲಾಡ್‌ ಹಾಗೂ ಖಾನ್‌ ಕುಮಾರಸ್ವಾಮಿ ಅವರೊಂದಿಗೆ ಹೆಜ್ಜೆಹಾಕಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

(ಏಜನ್ಸೀಸ್‌)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more