ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಿದ ಪ್ಲುಟೋ : ವಿಜ್ಞಾನಕ್ಕಿಂತ ಜ್ಯೋತಿಷ್ಯ ದೊಡ್ಡದು?

By Staff
|
Google Oneindia Kannada News

ಜಾರಿದ ಪ್ಲುಟೋ : ವಿಜ್ಞಾನಕ್ಕಿಂತ ಜ್ಯೋತಿಷ್ಯ ದೊಡ್ಡದು?
ಪಠ್ಯದಲ್ಲಿನ್ನು ಎಂಟು ಗ್ರಹಗಳು ಮಾತ್ರ.. ಪ್ಲುಟೋಗೆ ಕೊಕ್‌..

ನವದೆಹಲಿ : ಪ್ಲುಟೋ ಗ್ರಹವನ್ನು ನವಗ್ರಹಗಳ ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಈ ಬಾಹ್ಯಾಕಾಶ ಬೆಳವಣಿಗೆಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಹಾಗೂ ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ಹೇಳಿದೆ.

ಇನ್ನು ಮುಂದೆ ಸೌರಮಂಡಲದಲ್ಲಿ ಅಷ್ಟಗ್ರಹಗಳಿವೆ ಎಂದು ವಿದ್ಯಾರ್ಥಿಗಳು ಪಠ್ಯದಲ್ಲಿ ಓದಲಿದ್ದಾರೆ. ಈಗಾಗಲೇ ಪಠ್ಯ ಪುಸ್ತಕ ಸಿದ್ಧಗೊಂಡಿರುವ ಕಾರಣ, ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿರುವ ಸೌರಮಾನ ಸಂಗತಿಗಳನ್ನು ಮುಂದಿನ ವರ್ಷ ಪರಿಷ್ಕರಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.

ಪ್ಲುಟೋ ಗ್ರಹವಲ್ಲ ಎಂಬುದು ಮೊದಲೇ ಗೊತ್ತಿತ್ತು!

ವಿಜ್ಞಾನ ಇಂದು ಹೇಳಿದ ಸಂಗತಿಯನ್ನು ಜ್ಯೋತಿಷ್ಯ ಶಾಸ್ತ್ರ ಬಹುಹಿಂದೆಯೇ ಹೇಳಿದೆ. ಎಂದೂ ಪ್ಲುಟೋವನ್ನು ಜ್ಯೋತಿಷಿಗಳು ಗ್ರಹವೆಂದು ಒಪ್ಪಿಲ್ಲ. ಸೂರ್ಯನ ಪರಿವಾರದಲ್ಲಿರುವುದು ಅಷ್ಟಗ್ರಹಗಳು ಮಾತ್ರ ಎಂದು ಉದಯ ಟೀವಿಯಲ್ಲಿ ಭವಿಷ್ಯ ನುಡಿವ ಎಸ್‌.ಕೆ.ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

9ನೇ ಗ್ರಹ ಪ್ಲುಟೋ ಈಗೆಲ್ಲಿ ಹೋಯಿತು?

ಪ್ಲುಟೋ ಸೌರಮಂಡಲದಿಂದ ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ಗ್ರಹಗಳ ಲಕ್ಷಣಗಳಿಲ್ಲದ ಕಾರಣ, ಅದನ್ನು ಕಿರುಗ್ರಹಗಳ ಪಟ್ಟಿಗೆ ಸೇರಿಸಲಾಗಿದೆ ಅಷ್ಟೆ ಎಂದು ನೆಹರೂ ತಾರಾಲಯದ ವಿಜ್ಞಾನಿ ಡಾ.ಶೈಲಜಾ ವಿವರಣೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಶೋಧನೆಗಳು ಮುಂದುವರೆದ ಹಾಗೆ ಬದಲಾವಣೆಗಳು ಸಹಜ. ಕಿರುಗ್ರಹಗಳ ಪಟ್ಟಿಯಲ್ಲಿ ಝೆನಾ, ಸಿರಸ್‌ ಜೊತೆಗೆ ಪ್ಲುಟೋ ಈಗ ಸೇರ್ಪಡೆಯಾಗಿದೆ. ಪ್ಲುಟೋ 1930ರಲ್ಲಿ ಪತ್ತೆಯಾಗಿತ್ತು. ಆಗಿನಿಂದಲೂ ಅದು ಗ್ರಹವೇ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಈಗ ಜೆಕ್‌ ಗಣರಾಜ್ಯದ ಪ್ರಾಗ್‌ನಲ್ಲಿ ಅಂತಾರಾಷ್ಟ್ರೀಯ ಖಗೋಳ ಸಂಘಟನೆ ಸ್ಪಷ್ಟ ನಿರ್ಧಾರ ಕೈಗೊಂಡಿದೆ ಎಂದರು.

(ದಟ್ಸ್‌ ಕನ್ನಡ ಸುದ್ದಿ ಮನೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X