ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಬಹಿರಂಗಗೊಳಿಸಿದ್ದು ನಕಲಿ ಸಿ.ಡಿ - ಕುಮಾರಸ್ವಾಮಿ

By Staff
|
Google Oneindia Kannada News

ರೆಡ್ಡಿ ಬಹಿರಂಗಗೊಳಿಸಿದ್ದು ನಕಲಿ ಸಿ.ಡಿ - ಕುಮಾರಸ್ವಾಮಿ
ಸರ್ಕಾರ ಅಚಲ, ನಮ್ಮ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ.

ಗುಲ್ಬರ್ಗ : ವಿಧಾನ ಪರಿಷತ್‌ ಸದಸ್ಯ ಜಿ.ಜನಾರ್ದನ ರೆಡ್ಡಿ ಬಹಿರಂಗಪಡಿಸಿರುವ ಸಿ.ಡಿ.ಗಳು ಮತ್ತು ಧ್ವನಿಸುರಳಿ ನಕಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡುತ್ತಿದ್ದ ಅವರು, ಈ ಸಿ.ಡಿ. ಪ್ರಕರಣದಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಡಕಾಗುವುದಿಲ್ಲ. ನಾನು ಮತ್ತು ನಮ್ಮ ಕುಟುಂಬ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಗಳಾಗಿಲ್ಲ ಎಂದರು.

ಜನಾರ್ದನ ರೆಡ್ಡಿ ದಿನಕ್ಕೊಂದು ಮಾತನಾಡುತ್ತಾರೆ. ಮೊದಲು ಆರೋಪ ಮಾಡಿದರು, ನಂತರ ನಿರಾಕರಿಸಿದರು. ಸಾಕ್ಷಿ ರೂಪದಲ್ಲಿ ಒಂದು ಸಿ.ಡಿ ಇದೆ ಎಂದರು, ಈಗ ಆರು ಸಿ.ಡಿ.ಗಳಿವೆ ಎನ್ನುತ್ತಿದ್ದಾರೆ. ಬಹುಶಃ ಅವರು ಸಿ.ಡಿ.ಗಳ ನಿರ್ಮಾಪಕರಿರಬಹುದು ಎಂದು ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X