ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂಗೆ ಸಂಕಷ್ಟ : ಸಿ.ಡಿ ಮತ್ತು ಕ್ಯಾಸೆಟ್‌ನಲ್ಲೇನಿದೆ ಗೊತ್ತೆ?

By Staff
|
Google Oneindia Kannada News

ಸಿಎಂಗೆ ಸಂಕಷ್ಟ : ಸಿ.ಡಿ ಮತ್ತು ಕ್ಯಾಸೆಟ್‌ನಲ್ಲೇನಿದೆ ಗೊತ್ತೆ?
ದೇವೇಗೌಡರ ಸೊಸೆ ಹೆಸರಲ್ಲಿ ನೇರ ಅವ್ಯವಹಾರ. ಕೆಲವು ಚೆಕ್‌ ಸಂಖ್ಯೆಗಳೂ ಬಹಿರಂಗ.

ಬಳ್ಳಾರಿ : ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಜಿ.ಜನಾರ್ದನರೆಡ್ಡಿ, ಬುಧವಾರ(ಆ.23) ಬಹಿರಂಗಗೊಳಿಸಿರುವ ಸಿ.ಡಿ ಸಾಕ್ಷ್ಯದ ಪರಿಣಾಮಗಳ ಬಗ್ಗೆ ರಾಜ್ಯದಲ್ಲೀಗ ಬಿಸಿಬಿಸಿ ಚರ್ಚೆ.

ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಬಿಡುಗಡೆ ಮಾಡಿರುವ ವೀಡಿಯೋ ಸಿ.ಡಿಯಲ್ಲಿ ಏನಿದೆ ಎಂಬುದು ಜನಸಾಮಾನ್ಯರ ಕುತೂಹಲ. ಮಸುಕು ಮಸುಕು ದೃಶ್ಯಗಳ ಈ ಸಿ.ಡಿಯಲ್ಲಿ ವ್ಯಕ್ತಿಗಳಿಬ್ಬರು ಗಣಿ ವ್ಯವಹಾರದ ಬಗ್ಗೆ ಮಾತನಾಡುವುದು ದಾಖಲಾಗಿದೆ. ಸಿ.ಡಿಯಲ್ಲಿರುವ ದೃಶ್ಯಾವಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಣಿ ಮಾಲೀಕರಿಂದ ಲಂಚ ಪಡೆದಿದ್ದಾರೆಂಬುದನ್ನು ಸಾಬೀತುಪಡಿಸಿದೆ ಎಂದು ರೆಡ್ಡಿ ಹೇಳಿದ್ದಾರೆ.

ಸಿ.ಡಿ.ಜೊತೆಗೆ ಧ್ವನಿ ಸುರಳಿಯಾಂದನ್ನು ರೆಡ್ಡಿ ಬಿಡುಗಡೆ ಮಾಡಿದ್ದಾರೆ. ಮೂವರು ಗಣಿ ಮಾಲೀಕರು ತಾವು ಹೇಗೆ ಮುಖ್ಯಮಂತ್ರಿಗಳಿಗೆ ಲಂಚ ನೀಡುವ ಒತ್ತಡಕ್ಕೆ ಸಿಲುಕಿದ್ದೇವೆ ಎಂಬ ಸಂಗತಿಯನ್ನು ದೂರವಾಣಿಯಲ್ಲಿ ಮಾತನಾಡುತ್ತಿರುವುದನ್ನು ರೆಡ್ಡಿ ಸಾಕ್ಷ್ಯ ಬಹಿರಂಗಪಡಿಸಿದೆ.

ಕೆಲವು ಚೆಕ್‌ ಸಂಖ್ಯೆಗಳನ್ನೂ ಹೊರಗೆಡವಿರುವ ರೆಡ್ಡಿ, ಮುಖ್ಯಮಂತ್ರಿಗಳು ತಮ್ಮ ಅತ್ತಿಗೆ ಖಾತೆ ಮೂಲಕ ದೊಡ್ಡಮಟ್ಟದ ಹಣವನ್ನು ಪಡೆದಿದ್ದಾರೆ. ಕವಿತಾ ತಮ್ಮ ತಾಯಿ ಜಯಮ್ಮ ಅವರಿಗೆ ಐದು ಕೋಟಿ ರೂಪಾಯಿ ನೀಡಿರುವುದನ್ನು ಚೆಕ್‌ ಸಂಖ್ಯೆಗಳು ಸಾಬೀತುಪಡಿಸುತ್ತವೆ. ದೇವೇಗೌಡರ ಸೊಸೆ ಕವಿತಾ ಅವರ ಖಾತೆಗೆ ಹಣ ಜಮಾ ಆಗುತ್ತಿದ್ದಂತೆಯೇ, ದೇವೇಗೌಡರ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಖರೀದಿಸಲಾಗಿದೆ ಎಂದಿದ್ದಾರೆ.

ಪ್ರತಿಕ್ರಿಯೆ : ಈ ಹಣ ನ್ಯಾಯಯುತವಾಗಿ ಪಡೆದದ್ದು ಎಂದು ಮುಖ್ಯಮಂತ್ರಿಗಳ ಕಚೇರಿ ತನ್ನ ಪ್ರಾಥಮಿಕ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

(ಏಜನ್ಸೀಸ್‌)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X