ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸೀನಾಗೆ ಆ್ಯಸಿಡ್‌ ಎರಚಿದ ದುಷ್ಟನಿಗೆ ಜೀವಾವಧಿ ಶಿಕ್ಷೆ

By Staff
|
Google Oneindia Kannada News

ಹಸೀನಾಗೆ ಆ್ಯಸಿಡ್‌ ಎರಚಿದ ದುಷ್ಟನಿಗೆ ಜೀವಾವಧಿ ಶಿಕ್ಷೆ
ದಾಳಿಗೀಡಾದ ವ್ಯಕ್ತಿ ಜೀವಂತವಿರುವಾಗಲೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ

ಬೆಂಗಳೂರು : ಹಸೀನಾ ಆ್ಯಸಿಡ್‌ ದಾಳಿ ಪ್ರಕರಣದ ಆರೋಪಿ ಜೋಸೆಫ್‌ ರಾಡ್ರಿಗ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ, ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಸ್‌.ಆರ್‌.ಬನ್ನೂರಮಠ ಹಾಗೂ ನ್ಯಾಯಮೂರ್ತಿ ಸುಭಾಷ್‌.ಬಿ.ಆದಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಇದು ದಾಳಿಗೀಡಾದ ವ್ಯಕ್ತಿ ಜೀವಂತವಿರುವಾಗಲೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಎಂದು ದಾಖಲಾಗಿದೆ.

ಹಿನ್ನೆಲೆ : ಜೋಸೆಫ್‌ ರಾಡ್ರಿಗ್ಸ್‌ ಒಬ್ಬ ಕಂಪ್ಯೂಟರ್‌ ವ್ಯಾಪಾರಿ. ಹಸೀನಾ ಹುಸೇನ್‌(20) ಆತ ನಡೆಸುತ್ತಿದ್ದ ವ್ಯಾಪಾರದಲ್ಲಿ ಕೆಲಸ ಮಾಡುತ್ತಿದ್ದಾಕೆ. ಜೋಸೆಫ್‌ ರಾಡ್ರಿಗ್ಸ್‌ ಆಕೆಯ ಪ್ರೇಮಿ ಎನ್ನಲಾಗಿದ್ದು, ಹಸೀನಾ ಆತನ ಬಳಿ ಕೆಲಸದಲ್ಲಿ ಮುಂದುವರಿಯಲು ನಿರಾಕಸಿದಾಗ, ಆತ 1999ರ ಏಪ್ರಿಲ್‌ ತಿಂಗಳಲ್ಲಿ ಆ್ಯಸಿಡ್‌ ದಾಳಿ ನಡೆಸಿದ್ದ.

ಈ ದುರ್ಘಟನೆಯಲ್ಲಿ ಅಮಾಯಕಿ ಹಸೀನಾ ತೀವ್ರವಾಗಿ ಗಾಯಗೊಂಡು, ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಳು. ಘಟನೆ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಆರೋಪಿಗೆ ಐದು ವರ್ಷ ಮೂರು ತಿಂಗಳು ಸೆರೆವಾಸ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈ ಸಂಬಂಧ ಸರ್ಕಾರದ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಹೆಚ್ಚಿಸಬೇಕೆಂದು ಮನವಿ ಸಲ್ಲಿಸಿದ್ದರು.

ಹಸೀನಾ ಪ್ರತಿಕ್ರಿಯೆ : ತೀರ್ಪಿನಿಂದ ಸಂತೋಷವಾಗಿದೆ. ಆದರೆ ಆರೋಪಿಗೆ ಏನೇ ಶಿಕ್ಷೆಯಾದರೂ ನಾನು ಮೊದಲಿನ ಹಸೀನಾ ಆಗಲು ಸಾಧ್ಯವಿಲ್ಲ. ನನ್ನೆರಡೂ ಕಣ್ಣುಗಳು ಹೋದವು. ನಮ್ಮ ಕುಟುಂಬ ತೀವ್ರ ಸಂಕಟ ಅನುಭವಿಸಿದೆ. ಈಗಲೂ ತೊಂದರೆ ಕಡಿಮೆಯಾಗಿಲ್ಲ. ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಬಾರದೆಂದು ಯುವಕರು ಬುದ್ಧಿ ಕಲಿಯಲಿ. ಇಂತಹ ದಾಳಿಯಿಂದ ಕೇವಲ ಒಂದು ಹೆಣ್ಣಿನ ಬಾಳು ಹಾಳಾಗುವುದಿಲ್ಲ. ಇಡೀ ಕುಟುಂಬವೇ ಹಾಳಾಗುತ್ತದೆ ಎಂದು ಹಸೀನಾ ನೊಂದು ನುಡಿದಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X