‘ವಿಕ್ರಾಂತ ಕರ್ನಾಟಕ’ : ನೂತನ ವಾರಪತ್ರಿಕೆ ಆರಂಭ
‘ವಿಕ್ರಾಂತ ಕರ್ನಾಟಕ’ : ನೂತನ ವಾರಪತ್ರಿಕೆ ಆರಂಭ
ವೆಂಕಟಾಚಲರ ಸಿಟ್ಟಿಗೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟೀಕರಣ
-ಇಂಥದ್ದೊಂದು ಪ್ರಶ್ನೆ ಮುಂದಿಟ್ಟು, ನೊಂದವರು; ವಿಶ್ರಾಂತ ಲೋಕಾಯುಕ್ತ ವೆಂಕಟಾಚಲ. ನಗರದ ಯವನಿಕಾ ಸಭಾಂಗಣದಲ್ಲಿ ‘ವಿಕ್ರಾಂತ ಕರ್ನಾಟಕ’ ನೂತನ ವಾರಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಬದುಕಿನ ಕೊನೆ ಉಸಿರಿಡುವ ತನಕ ಹೋರಾಡಲು ನಾನು ಬದ್ಧ ಎಂದರು.
ವೆಂಕಟಾಚಲರ ಮಾತಿಗೆ ಪ್ರತ್ಯುತ್ತರದಂತೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಎಲ್ಲರೂ ಭ್ರಷ್ಟರಲ್ಲ.. ಅವರ ಸಂಖ್ಯೆ ಸ್ವಲ್ಪ ಜಾಸ್ತಿಯಿರಬಹುದು. ನಾನು ಸಚಿವನಾಗಿದ್ದ ಅವಧಿಯಲ್ಲಿ, ನಮ್ಮ ಇಲಾಖೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದರು.
ಕಲ್ಲು-ಮುಳ್ಳಿನ ಹಾದಿ : ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ಮಾತನಾಡಿ, ಪತ್ರಿಕೆ ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ನಿಜಕ್ಕೂ ತ್ರಾಸದಾಯಕ ಸಂಗತಿ. ಓದುಗರ ಅಗತ್ಯಗಳಿಗೆ ಸ್ಪಂದಿಸಿ, ಕಷ್ಟಪಟ್ಟು ದುಡಿದರೆ ದೀರ್ಘಕಾಲದಲ್ಲಿ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ‘ವಿಕ್ರಾಂತ ಕರ್ನಾಟಕ’ ಎಚ್ಚರಿಕೆಯಿಂದ ಹೆಜ್ಜೆ ಹಾಕಿ, ಯಶಸ್ಸು ಪಡೆಯಲಿ. ಅದು ‘ವಿಶ್ರಾಂತ ಕರ್ನಾಟಕ’ವಾಗದಿರಲಿ ಎಂದು ಕಿವಿಮಾತುಗಳೊಂದಿಗೆ ಶುಭ ಹಾರೈಸಿದರು.
ನಟಿ ತಾರಾ ‘ವಿಕ್ರಾಂತ ಕರ್ನಾಟಕ’ ವೆಬ್ಸೈಟ್ ಬಿಡುಗಡೆ ಮಾಡಿದರು. ‘ವಿಕ್ರಾಂತ ಕರ್ನಾಟಕ’ ಬಳಗದ ಸತ್ಯಮೂರ್ತಿ ಆನಂದೂರು, ವಿದ್ಯಾರಣ್ಯ, ಬಿ.ಕೆ.ಸುರೇಶ್, ರಾಜಲಕ್ಷ್ಮೀ ಕೋಡಿಬೆಟ್ಟು ಮತ್ತಿತರರು ಹಾಜರಿದ್ದರು. ಶಮಿತಾ ಮಲ್ನಾಡು ಕಾರ್ಯಕ್ರಮ ನಿರೂಪಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು