ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಾಣಿ ಜಸ್ಮಾಗೆ ಕಣ್ಣಿನ ಪೊರೆ : ಸಫಲವಾದ ಶಸ್ತ್ರ ಚಿಕಿತ್ಸೆ

By Staff
|
Google Oneindia Kannada News

ಪುಟಾಣಿ ಜಸ್ಮಾಗೆ ಕಣ್ಣಿನ ಪೊರೆ : ಸಫಲವಾದ ಶಸ್ತ್ರ ಚಿಕಿತ್ಸೆ
ಲಯನ್ಸ್‌ಕ್ಲಬ್‌ನಿಂದ ಶಸ್ತ್ರಚಿಕಿತ್ಸೆಗೆ 60 ಸಾವಿರ ರೂ.ಗಳ ನೆರವು

ಬೆಂಗಳೂರು : ಕಣ್ಣಿನ ಪೊರೆಯಿಂದ ಪ್ರಪಂಚ ನೋಡುವ ಶಕ್ತಿ ಕಳೆದುಕೊಂಡಿದ್ದ, ಒಂದೂವರೆ ವರ್ಷದ ಪುಟಾಣಿ ಜಸ್ಮಾಗೆ ಮತ್ತೆ ದೃಷ್ಠಿ ಬರಲಿದೆ. ಈ ಸಂಬಂಧ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ನಗರದ ನೇತ್ರಧಾಮ ಆಸ್ಪತ್ರೆಯಲ್ಲಿ ಎರಡು ಗಂಟೆಗೂ ಹೆಚ್ಚುಕಾಲ, ಡಾ.ಶ್ರೀಗಣೇಶ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಣ್ಣಿನ ಪೊರೆ ಬರುತ್ತದೆ. ಆದರೆ ಜಸ್ಮಾಗೆ ಹುಟ್ಟಿನಿಂದಲೇ ಪೊರೆ ಇದ್ದದ್ದು ಆಶ್ಚರ್ಯದ ಸಂಗತಿ. ಅಲ್ಲದೇ ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಅಪರೂಪದ ಪ್ರಕರಣ.

ಬಡಕುಟುಂಬದಲ್ಲಿ ಜನಿಸಿದವಳು; ಜಸ್ಮಾ. ಅವಳ ತಂದೆ ಇಯಾಜ್‌ ಅವರದು, ಮರಗೆಲಸದ ಉದ್ಯೋಗ. ತನ್ನ ಮಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಅಗತ್ಯವಿರುವಷ್ಟು ಹಣ ಹೊಂದಿಸಲು ಸಾಧ್ಯವಾಗದೇ, ಇಯಾಜ್‌ ಕೊರಗುತ್ತಿದರು. ಈ ಮಧ್ಯೆ ಶಸ್ತ್ರಚಿಕಿತ್ಸೆಗೆ 60 ಸಾವಿರ ನೆರವು ನೀಡಿದ ಲಯನ್ಸ್‌ ಕ್ಲಬ್‌, ಪುಟಾಣಿ ಜಸ್ಮಾಳ ಬದುಕಿಗೆ ಬೆಳಕು ನೀಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X