• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ಕಿದಳು ಕೃಷ್ಣೆ : ಸಂಗಮನಾಥ ದೇವಾಲಯ ಜಲಾವೃತ

By Staff
|

ಉಕ್ಕಿದಳು ಕೃಷ್ಣೆ : ಸಂಗಮನಾಥ ದೇವಾಲಯ ಜಲಾವೃತ
ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೀತಿ, ಕಳೆದ ವರ್ಷದ ಪುನರಾವರ್ತನೆ

ಬಾಗಲಕೋಟೆ : ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಿದೆ.

ಕಳೆದ ಕೆಲವು ದಿನಗಳಿಂದ ನೀರಿನ ಮಟ್ಟ ಹೆಚ್ಚುತ್ತಿದ್ದರಿಂದ, ಕೂಡಲಸಂಗಮ ಸೇರಿದಂತೆ ಕೃಷ್ಣಾ, ಘಟಪ್ರಭಾ ನದಿ ತೀರದ ಗ್ರಾಮಗಳ ಜನರು ಭೀತಿಗೊಳಗಾಗಿದ್ದರು. ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಬಹುದು ಎಂಬ ಸಂದೇಹವೂ ಇತ್ತು. ಈ ಸಂದೇಹ ಸತ್ಯವಾಯಿತು.

ಕೂಡಲಸಂಗಮ 12ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ಕಾರ್ಯಕ್ಷೇತ್ರ. ಅವರ ಗುರು ಜಾತವೇದ ಮುನಿಗಳು ಇಲ್ಲೇ ನೆಲೆಸಿದ್ದರು. ಬಸವಣ್ಣ ತಮ್ಮ ಬಾಲ್ಯವನ್ನೂ ಇಲ್ಲಿ ಕಳೆದಿದ್ದರು. ಅಲ್ಲದೆ ಅವರು ಕೂಡಲಸಂಗಮನಾಥನ ಭಕ್ತರೂ ಆಗಿದ್ದರು. ಅವರು ತಮ್ಮ ವಚನಾಂಕಿತದಲ್ಲಿ ಕೂಡಲಸಂಗಮದೇವ ಎಂದು ಬರೆದಿರುವುದು ಉಲ್ಲೇಖಾರ್ಹ.

ಇಷ್ಟೆಲ್ಲ ಐತಿಹಾಸಿಕ ಮಹತ್ವವುಳ್ಳ ಕೂಡಲಸಂಗಮವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗಿದೆ. ಬಸವಣ್ಣನವರ ಐಕ್ಯ ಸ್ಥಳವನ್ನು ಸಂರಕ್ಷಿಸಲಾಗಿದೆ. ಆದರೂ ಸಂಗಮನಾಥ ದೇವಾಲಯ ಜಲಾವೃತವಾಗಿರುವುದು, ಪ್ರವಾಹದೆದುರು ಎಲ್ಲವೂ ಸುಳ್ಳು ಎಂಬುದನ್ನು ಪ್ರಕೃತಿಯೇ ಹೇಳಿದಂತಾಗಿದೆ.

ಕಳೆದ ವರ್ಷವೂ ಸಂಗಮನಾಥ ದೇವಾಲಯ ಜಲಾವೃತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್‌ಕನ್ನಡ ವಾರ್ತೆ)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more