ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಾರು ಭಿಕ್ಷುಕರಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

By Staff
|
Google Oneindia Kannada News

ನೂರಾರು ಭಿಕ್ಷುಕರಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಉನ್ನತ ಶಿಕ್ಷಣ ಸಚಿವ ಸಮೀರ್‌ ಡೇಯಿಂದ ಧ್ವಜಾರೋಹಣ

ಪುರಿ(ಒರಿಸ್ಸಾ) : ಭಿಕ್ಷಾಟನೆಯಿಂದ ಮುಕ್ತಿ ಬಯಸಿ, ಸುಮಾರು 150ಕ್ಕೂ ಹೆಚ್ಚು ಭಿಕ್ಷುಕರನ್ನೊಳಗೊಂಡ ಗುಂಪೊಂದು ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿರುವುದು ವರದಿಯಾಗಿದೆ.

ಈ ಭಿಕ್ಷುಕರ ಗುಂಪು, ಧ್ವಜಾರೋಹಣ ಹಾಗೂ ರಾಷ್ಟ್ರಗೀತೆ ನಂತರ ಸಿಹಿ ವಿತರಿಸಿತು. ಉನ್ನತ ಶಿಕ್ಷಣ ಸಚಿವ ಸಮೀರ್‌ ಡೇ ಧ್ವಜಾರೋಹಣ ನೆರವೇರಿಸಿದರು. ಫ್ರೀಡಂ ಫ್ರಾಂ ಬೆಗ್ಗಿಂಗ್‌(ಭಿಕ್ಷಾಟನೆಯಿಂದ ಬಿಡುಗಡೆ) ಎಂಬ ಸರ್ಕಾರೇತರ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು.

‘ದೇಶದಲ್ಲಿ ಪ್ರತಿಯಾಬ್ಬರಿಗೂ ಸುಂದರವಾದ ಬದುಕು ಸಿಗಬೇಕು. ನಮಗೆ ನಮ್ಮದೇ ಆದ ಬದುಕು ಕೊಡಿ. ಭಿಕ್ಷೆ ಬೇಡುವ ಅನಿವಾರ್ಯತೆ ತಪ್ಪಿಸಿ’ ಎಂದು ಭಿಕ್ಷುಕರು, ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X