ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲೇವಿನ್‌ ಲಾಟರಿಗೀಗ ಸ್ವಾತಂತ್ರ್ಯ : ಅದೃಷ್ಟದಾಟ ಶುರು!

By Staff
|
Google Oneindia Kannada News

ಪ್ಲೇವಿನ್‌ ಲಾಟರಿಗೀಗ ಸ್ವಾತಂತ್ರ್ಯ : ಅದೃಷ್ಟದಾಟ ಶುರು!
ಎರಡು ವರ್ಷಗಳ ನಂತರ ಮತ್ತೆ ಪ್ರವೇಶ : ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಸಮರ

ಬೆಂಗಳೂರು : ಪ್ಲೇವಿನ್‌ ಆನ್‌ಲೈನ್‌ ಲಾಟರಿ, ಎರಡು ವರ್ಷಗಳ ನಂತರ ಮತ್ತೆ ಕರ್ನಾಟಕಕ್ಕೆ ಮರಳಿದೆ. ಬೆಂಗಳೂರು ಸೇರಿದಂತೆ ರಾಜ್ಯದ 250 ಕೇಂದ್ರಗಳಲ್ಲಿ ಲಾಟರಿ ಆಟ ಸೋಮವಾರ(ಆ.14)ದಿಂದ ಆರಂಭವಾಗಿದೆ.

ಏಳು ಮಾದರಿಯ ಟಿಕೆಟ್‌ಗಳನ್ನು ಮಾರುಕಟ್ಟೆಗೆ ತಂದಿದ್ದು, ‘ಕರ್ನಾಟಕ, ಸ್ಟಾರ್ಟ್‌ ಡ್ರೀಮಿಂಗ್‌’ ಎಂಬ ಸ್ಲೋಗನ್‌ನೊಂದಿಗೆ ಪ್ಲೇವಿನ್‌ ಕಣಕ್ಕಿಳಿದಿದೆ. ಬೆಂಗಳೂರಿನಲ್ಲಿ ಪ್ಲೇವಿನ್‌ನ ಶೇ.40ರಷ್ಟು ಕೇಂದ್ರಗಳು ತಲೆ ಎತ್ತಿವೆ ಎಂದು ಪ್ಲೇವಿನ್‌ ರಾಜ್ಯವಿಭಾಗದ ಮುಖ್ಯಸ್ಥ ಉಪೇಂದ್ರ ಕುಲಕರ್ಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನ್‌ಲೈನ್‌ ಲಾಟರಿ ನಿರ್ಬಂಧದಿಂದ ರಾಜ್ಯ ಸರ್ಕಾರಕ್ಕೆ ಕಳೆದ ಎರಡು ವರ್ಷಗಳಲ್ಲಿ 300ಕೋಟಿ, ಪ್ಲೇವಿನ್‌ ಕಂಪನಿಗೆ 1500 ಕೋಟಿ ನಷ್ಟವಾಗಿದೆ ಎಂದು ಕುಲಕರ್ಣಿ ಹೇಳಿದ್ದಾರೆ.

ಮತ್ತೇಕೆ ಬಂದಳು ಆನ್‌ಲೈನ್‌ ಲಕ್ಷ್ಮಿ? : ಆನ್‌ಲೈನ್‌ ಲಾಟರಿ ನಿರ್ಬಂಧಕ್ಕೆ ರಾಜ್ಯ ಸರ್ಕಾರ ವಿಧಿಸಿದ್ದ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಪೇಪರ್‌ ಲಾಟರಿಗೆ ಅವಕಾಶ ನೀಡುವ ಸರ್ಕಾರ, ಆನ್‌ಲೈನ್‌ ಲಾಟರಿ ನಿಷೇಧಿಸುವುದು ಸಲ್ಲದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್‌ ಕ್ರಮವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಸೆ.8ರಂದು ವಿಚಾರಣೆ ನಡೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X