ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಂಟ್‌ ಲೂಯಿಸ್‌ನಲ್ಲಿ ‘ಹಿಂಸೈ ಅರಸನ್‌ 23ನೇ ಪುಲಿಕೇಶಿ’

By Staff
|
Google Oneindia Kannada News

ಸೇಂಟ್‌ ಲೂಯಿಸ್‌ನಲ್ಲಿ ‘ಹಿಂಸೈ ಅರಸನ್‌ 23ನೇ ಪುಲಿಕೇಶಿ’
ಚಿತ್ರ ಪ್ರದರ್ಶನಕ್ಕೆ ತಮಿಳು ಸಂಘಗಳ ಉತ್ಸುಕತೆ, ಕನ್ನಡ ಪರ ಸಂಘಟನೆಗಳ ವಿರೋಧ

ಸೇಂಟ್‌ ಲೂಯಿಸ್‌(ಯುಎಸ್‌ಎ) : ಸೇಂಟ್‌ ಲೂಯಿಸ್‌ನಲ್ಲಿ ‘ಹಿಂಸೈ ಅರಸನ್‌ 23ನೇ ಪುಲಿಕೇಶಿ’ ಚಿತ್ರದ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಈ ಬೆನ್ನಲ್ಲಿ ಪ್ರದರ್ಶನವನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ಎಲ್ಲೆಡೆಯೂ ರದ್ದು ಪಡಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.

ಕರ್ನಾಟಕಾದ್ಯಂತ ಪ್ರದರ್ಶನ ರದ್ದತಿ ಕಂಡ ಈ ವಿವಾದಿತ ತಮಿಳು ಚಲನಚಿತ್ರವನ್ನು, ಜುಲೈ 23ರಂದು ಸೇಂಟ್‌ ಲೂಯಿಸ್‌ನಲ್ಲಿ ಪ್ರದರ್ಶಿಸಲು ಮಿಸ್ಸೌರಿ ತಮಿಳು ಸಂಘಂ ಮುಂದಾಗಿದೆ.

ತಮಿಳು ಹಾಸ್ಯನಟ ವಡಿವೇಲು ಚಿತ್ರದ ನಾಯಕ. ಈ ಚಿತ್ರದಲ್ಲಿ ಕನ್ನಡದ ರಾಜ ‘ಪುಲಿಕೇಶಿ’ಯನ್ನು, ಹಾಗೂ ಕನ್ನಡದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮನ ಬಲಗೈ ಬಂಟ ವೀರ ‘ಸಂಗೊಳ್ಳಿ ರಾಯಣ್ಣ’ನನ್ನು ಅವಮಾನಿಸುವ ಮೂಲಕ ಕನ್ನಡ ಪರಂಪರೆಗೆ ಕೆಸರೆರಚಲಾಗಿದೆ ಎಂಬ ಕಾರಣದಿಂದ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಕರ್ನಾಟಕಾದ್ಯಂತ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿತ್ತು.

ವಿವಾದಿತ ಚಿತ್ರ ಪ್ರದರ್ಶನ ಸ್ಥಳ :

ವೇರೆನ್‌ಬರ್ಗ್‌, ಸೇಂಟ್‌ ಚಾರ್ಲ್ಸ್‌ 18 ಸಿನೆ,
1830 ಎಸ್‌, ಫಸ್ಟ್‌ ಕ್ಯಾಪಿಟಾಲ್‌ ಡಿಆರ್‌,
ಸೇಂಟ್‌ ಚಾರ್ಲ್ಸ್‌,
ಎಂಓ 63303

(ಏಜೆನ್ಸೀಸ್‌)

ಪೂರಕ ಓದಿಗೆ-
ತಮಿಳು ಸಿನಿಮಾ : ಪುಲಿಕೇಶಿ-ಸಂಗೊಳ್ಳಿರಾಯಣ್ಣನ ಮುಖಕ್ಕೆ ಮಸಿ
ನಮ್ಮ ಪುಲಿಕೇಶಿಗೆ ಮಸಿಬಳಿದ ತಮಿಳು ಚಿತ್ರಕ್ಕೆ ಗೇಟ್‌ಪಾಸ್‌

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X