ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ - ಬಿಎಸ್‌ವೈ

By Staff
|
Google Oneindia Kannada News

ಒಂದು ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ - ಬಿಎಸ್‌ವೈ
ಹೊಸ ಯೋಜನೆ : 35 ಕೋಟಿ ರೂಪಾಯಿ ಮೀಸಲು, ವಿವಿಧ ಕೈಗಾರಿಕೆಗಳಲ್ಲಿ ಕೆಲಸ

ಬೆಳಗಾವಿ : ಒಂದು ಲಕ್ಷ ನಿರುದ್ಯೋಗಿಗಳನ್ನು ವಿವಿಧ ಕೈಗಾರಿಕೆಗಳಲ್ಲಿ ನೇಮಿಸಿಕೊಂಡು, ಪ್ರತಿ ತಿಂಗಳು 1,500 ರೂಪಾಯಿ ಸ್ಟೈಪೆಂಡ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿ.ಎಸ್‌.ಯಡಿಯೂರಪ್ಪ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಉಡುಪು ಕ್ಷೇತ್ರದ ಉದ್ಯಮಗಳಲ್ಲಿ 25 ಸಾವಿರ, ಪ್ರಿಂಟಿಂಗ್‌ ಕ್ಷೇತ್ರದ ಉದ್ಯಮಗಳಲ್ಲಿ 20 ಸಾವಿರ, ಇಂಜಿನೀಯರಿಂಗ್‌ ಹಾಗೂ ಯಾಂತ್ರಿಕ ಕ್ಷೇತ್ರದ ಉದ್ಯಮಗಳಲ್ಲಿ 50 ಸಾವಿರ ನಿರುದ್ಯೋಗಿ ಯುವಕ-ಯವತಿಯರಿಗೆ ತರಬೇತಿ ನೀಡಲಾಗುವುದು.

ನಿರುದ್ಯೋಗ ಹಾಗೂ ಬಡತನ ನಿವಾರಣೆ ದೃಷ್ಟಿಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರ ಇದಕ್ಕಾಗಿ 35 ಕೋಟಿ ರೂಪಾಯಿ ಮೀಸಲಿಡಲಿದೆ. ಶೀಘ್ರವೇ ಯೋಜನೆ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.

ಆರು ತಿಂಗಳು, ಒಂಬತ್ತು ತಿಂಗಳು ಹಾಗೂ ಒಂದು ವರ್ಷದವರೆಗೆ ತರಬೇತಿ ನೀಡಲಾಗುವುದು. ತರಬೇತಿ ನಂತರ, ತರಬೇತಿ ಪಡೆದ ಸ್ಥಳದಲ್ಲೇ ಕೆಲಸ ಸಿಗಬಹುದು. ಇಲ್ಲದಿದ್ದರೆ ಬೇರೆ ಕಡೆಗೆ ಹೋಗಬಹುದು. ತರಬೇತಿ ನಂತರ ಸರ್ಕಾರ ಪ್ರಮಾಣ ಪತ್ರ ನೀಡಲಿದ್ದು, ತರಬೇತಿ ಪಡೆದವರು ಸ್ವಯಂ ಉದ್ಯೋಗ ಪ್ರಾರಂಭಿಸಲು ಬಯಸಿದರೆ ಸಾಲ ಸೌಲಭ್ಯವನ್ನೂ ಒದಗಿಸಲಿದೆ ಎಂದು ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X