ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಾಪ್‌ ಹೆಸರಲ್ಲಿ ಪ್ರಾಣ-ಹಣ-ಮಾನ ದೋಚುವರು?

By Staff
|
Google Oneindia Kannada News

ಡ್ರಾಪ್‌ ಹೆಸರಲ್ಲಿ ಪ್ರಾಣ-ಹಣ-ಮಾನ ದೋಚುವರು?
ಆಟೋ ಚಾಲಕನಿಂದ ವಿದೇಶಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ.

ಬೆಂಗಳೂರು : ಐಟಿ ಸಿಟಿ ಬೆಂಗಳೂರಿನಲ್ಲಿ ವಾಹನಗಳಲ್ಲಿ ಪ್ರಯಾಣಿಸುವಾಗ ಮೈಯೆಲ್ಲ ಕಣ್ಣಾಗಿರಲಿ! ಕಾರಣ; ವಾಹನ ಚಾಲಕರ ವಂಚನೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಈ ಸಾಲಿಗೆ ಆಟೋ ಚಾಲಕನ ಅತ್ಯಾಚಾರ ಮತ್ತು ದರೋಡೆ ಯತ್ನ ಹೊಸ ಸೇರ್ಪಡೆ.

ವಿದೇಶಿ ಮಹಿಳೆಯಾಬ್ಬಳಿಗೆ, ಆಟೋ ಚಾಲಕನೊಬ್ಬನಿಂದ ವಿಕೃತ ಕಾಮಕ್ಕೆ ಬಲಿಯಾಗುವ ಸನ್ನಿವೇಶ ಅದೃಷ್ಟವಶಾತ್‌ ತಪ್ಪಿದೆ. ಆಸ್ಟ್ರೇಲಿಯಾ ಮೂಲದ ಸಾರಾ ಪೋಲರ್‌ ಎಂಬಾಕೆ, ಮೆಜೆಸ್ಟಿಕ್‌ಗೆ ತೆರಳಲು ಆಟೋ ಹತ್ತಿದಾಗ ಈ ಘಟನೆ ನಡೆದಿದೆ.

ಮೆಜೆಸ್ಟಿಕ್‌ಗೆ ಸಮೀಪದ ದಾರಿಯೆಂದು ಎಲ್ಲೆಲ್ಲೊ ಸುತ್ತಿಸಿ, ಬಳ್ಳಾರಿ ರಸ್ತೆಯ ತಿರುವೇನಹಳ್ಳಿ ಕ್ರಾಸ್‌ ಸಮೀಪದ ನೀಲಗಿರಿ ತೋಪಿನ ಬಳಿ ಆಟೋ ನಿಲ್ಲಿಸಿ, ಅತ್ಯಾಚಾರಕ್ಕೆ ಚಾಲಕ ಯತ್ನಿಸಿದ ಎಂದು ಮಹಿಳೆ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದಾಳೆ.

ಆ ಸಂದರ್ಭದಲ್ಲಿ ತಪ್ಪಿಸಿಕೊಂಡು ರಸ್ತೆಗೆ ಬಂದೆ. ಸಹಾಯಕ್ಕೆ ಕೂಗಿದಾಗ, ಸಮೀಪದ ಜನರು ನೆರವಿಗೆ ಬಂದರು. ಕೂಡಲೇ ಆಟೋ ಚಾಲಕ, ಆಟೋದೊಂದಿಗೆ ಪರಾರಿಯಾದ. ಆಟೋದಲ್ಲಿದ್ದ ನನ್ನ ಪರ್ಸ್‌ನಲ್ಲಿ 3000 ರೂ. ನಗದು ಮತ್ತು ಕ್ಯಾಮೆರಾ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಇನ್ನೆರಡು ಆತಂಕದ ಘಟನೆಗಳು :

  • ಡ್ರಾಪ್‌ ನೀಡುವ ನೆಪದಲ್ಲಿ ನಾಲ್ವರು ಪ್ರಯಾಣಿಕರನ್ನು ತಮ್ಮ ಟಾಟಾ ಸುಮೋ ವಾಹನದಲ್ಲಿ ಹತ್ತಿಸಿಕೊಂಡ ಅಪರಿಚಿತರು, ಸ್ವಲ್ಪ ದೂರ ಹೋದ ನಂತರ, ಮರಕಾಯುಧ ತೋರಿಸಿ ದರೋಡೆ ಮಾಡಿದ್ದಾರೆ. 45ಸಾವಿರ ರೂ. ನಗದು ಮತ್ತು ಮೊಬೈಲ್‌ ಫೋನ್‌ಗಳನ್ನು ದೋಚಲಾಗಿದೆ. ಈ ಪ್ರಕರಣ ನಗರದ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
  • ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯಾಬ್ಬನ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು, ಆತನನ್ನು ರೈಲು ಹಳಿಯ ಮೇಲೆ ಹಾಕಿ ಪರಾರಿಯಾಗಿದ್ದಾರೆ. ಆದೇ ದಾರಿಯಲ್ಲಿ ಬರುತ್ತಿದ್ದ ಯುವಕರು, ರೈಲು ಹಳಿ ಮೇಲಿದ್ದ ವ್ಯಕ್ತಿಯನ್ನು ಬದಿಗೆ ತಂದು, ಹೆಚ್ಚಿನ ಆಪಾಯ ತಪ್ಪಿಸಿದ್ದಾರೆ. ಹಲ್ಲೆಗೆ ಸಿಲುಕಿದ ವ್ಯಕ್ತಿಯನ್ನು ಬಹುರಾಷ್ಟ್ರೀಯ ಕಂಪನಿಯಾಂದರಲ್ಲಿ ಕೆಲಸ ಮಾಡುವ ರಾಮಕೃಷ್ಣ(26) ಎಂದು ಗುರ್ತಿಸಲಾಗಿದೆ.
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X