• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರು : 98 ಗಂಟೆ ಉಪನ್ಯಾಸಕ್ಕೆ ‘ಗಿನ್ನಿಸ್‌’ ಗರಿ

By Staff
|

ಮಂಗಳೂರು : 98 ಗಂಟೆ ಉಪನ್ಯಾಸಕ್ಕೆ ‘ಗಿನ್ನಿಸ್‌’ ಗರಿ

ಸಾಧಕ ಅಣ್ಣಯ್ಯ ರಮೇಶ್‌ಗೆ ರಾಜ್ಯದ ಬಡವ ವಿದ್ಯಾರ್ಥಿಗಳಿಗೆ ನೆರವು ನೀಡುವ ಹಂಬಲ

ಬೆಂಗಳೂರು : ಸುಮಾರು 98ಗಂಟೆ 30ನಿಮಿಷ ನಿರಂತರ ಉಪನ್ಯಾಸ ನೀಡುವ ಮೂಲಕ, ಮಂಗಳೂರು ವಿವಿ ಉಪನ್ಯಾಸಕ ಡಾ.ಅಣ್ಣಯ್ಯ ರಮೇಶ್‌ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ.

ತಮಗೆ ದೊರೆತ ಗಿನ್ನಿಸ್‌ ಪ್ರಮಾಣ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, ನನ್ನ ಬಹುದಿನಗಳ ಕನಸು ನೆರವೇರಿದೆ. ನನ್ನ ಇನ್ನೊಂದು ಕನಸು ಸದ್ಯದಲ್ಲಿಯೇ ನೆರವೇರಲಿದೆ ಎಂದರು.

ಗಿನ್ನಿಸ್‌ ಸಾಧನೆಯ ಬೆನ್ನಲ್ಲಿಯೇ, ಬಡ ವಿದ್ಯಾರ್ಥಿಗಳಿಗಾಗಿ ‘ಲಾಂಗೆಸ್ಟ್‌ ಮ್ಯಾರಾಥಾನ್‌ ಲೆಕ್ಚರ್‌ ಚಾರಿಟಬಲ್‌ ಟ್ರಸ್ಟ್‌’ ಆರಂಭಿಸಲು ನಿರ್ಧರಿಸಿದ್ದೇನೆ. ಆಗಸ್ಟ್‌ನೊಳಗೆ ಟ್ರಸ್ಟ್‌ ಅಸ್ತಿತ್ವಕ್ಕೆ ಬರಲಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶವನ್ನು ಟ್ರಸ್ಟ್‌ ಹೊಂದಿದ್ದು, ಸುಮಾರು 8-10ಕೋಟಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಗಿದೆ. ನಮ್ಮ ಚಾರಿಟಬಲ್‌ ಟ್ರಸ್ಟ್‌, ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲಿದೆ. ನಮ್ಮ ಕಾರ್ಯವೈಖರಿಯನ್ನು ಕಂಡೇ, ಜನ ಮತ್ತು ಸಂಘಟನೆಗಳು ನೆರವು ನೀಡಲು ಮುಂದಾಗಲಿದ್ದಾರೆ ಎಂದು ಡಾ.ಅಣ್ಣಯ್ಯ ರಮೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಿನ್ನಿಸ್‌ ಸಾಧನೆಯ ವಿವರ : ಪ್ರಪಂಚದ ದೊಡ್ಡ ಉಪನ್ಯಾಸ ಎಂಬ ಹೆಗ್ಗಳಿಕೆಗೆ ಡಾ.ಅಣ್ಣಯ್ಯ ರಮೇಶ್‌ರ ಉಪನ್ಯಾಸ ಪಾತ್ರವಾಗಿದೆ. ಮಾ.22ರಿಂದ 26,2006ರವರೆಗೆ ಉಪನ್ಯಾಸ ಕಾರ್ಯಕ್ರಮ ನಡೆದಿತ್ತು. ಮಂಗಳೂರು ವಿವಿಯ ಹಳೇ ಸೆನೆಟ್‌ ಹಾಲ್‌ನಲ್ಲಿ Molecular logic of life ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು.

ಈ ಹಿಂದೆ ನಾರಾಯಣ ಎಂಬಾತ ಹಿಂದಿ ವ್ಯಾಕರಣದ ಬಗ್ಗೆ 72 ಗಂಟೆ ಉಪನ್ಯಾಸ ನೀಡಿದ್ದರು. ಆ ದಾಖಲೆಯನ್ನು ಅಣ್ಣಯ್ಯ ರಮೇಶ್‌ ಮುರಿದು, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more