ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ ಲೀಲೆ : 150 ಕೋಟಿ ಲಂಚ ಪ್ರಕರಣ ಫಿನಿಷ್‌

By Staff
|
Google Oneindia Kannada News

ಕುಮಾರ ಲೀಲೆ : 150 ಕೋಟಿ ಲಂಚ ಪ್ರಕರಣ ಫಿನಿಷ್‌
ಮಾತು ಬದಲಿಸಿದ ಜನಾರ್ದನ ರೆಡ್ಡಿ, ಸಮ್ಮಿಶ್ರ ಸರ್ಕಾರದ ಹಾದಿ ಸುಗಮ

ಬೆಂಗಳೂರು : ಸುಮಾರು 8-10ದಿನಗಳಿಂದ, ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಬಳ್ಳಾರಿ ಗಣಿಗಾರಿಕೆ ಲಂಚ ಪ್ರಕರಣಕ್ಕೆ ತೆರೆ ಬಿದ್ದಿದೆ. ತಮ್ಮ ಹೇಳಿಕೆ ಬದಲಿಸುವ ಮೂಲಕ, ವಿವಾದಕ್ಕೆ ವಿಧಾನಪರಿಷತ್ತು ಸದಸ್ಯ ಜನಾರ್ದನ ರೆಡ್ಡಿ ಮಂಗಳ ಹಾಡಿದ್ದಾರೆ.

ಬಿಜೆಪಿ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜನಾರ್ದನ ರೆಡ್ಡಿ, ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿ ಸುದ್ದಿಗಾರರಿಗೆ ಗೋಚರಿಸಿತು. ಸಮ್ಮಿಶ್ರ ಸರ್ಕಾರದ ರಕ್ಷಣೆಗಾಗಿ ಜೆಡಿಎಸ್‌-ಬಿಜೆಪಿ ಪಕ್ಷಗಳು ರಾಜಿ ಸೂತ್ರ ಅನುಸರಿಸಿ, ಮುಖ್ಯಮಂತ್ರಿಗಳನ್ನು ಮುಜುಗರದಿಂದ ಪಾರು ಮಾಡಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಚೆನ್ನಿಗಪ್ಪ ಗಣಿ ಮಾಲೀಕರಿಂದ 150 ಕೋಟಿ ರೂ.ಲಂಚ ಸ್ವೀಕರಿಸಿದ್ದಾರೆ ಎಂದು ನಾನು ಆರೋಪಿಸಿಲ್ಲ. ಅವರ ಹೆಸರನ್ನು ಇತರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೆ. ಮುಖ್ಯಮಂತ್ರಿಗಳ ಬಗ್ಗೆ ನನಗೆ ಗೌರವವಿದೆ. ಅವರ ಆಡಳಿತ ರಾಜ್ಯಕ್ಕೆ ಬೇಕು ಎಂದು ಜನಾರ್ದನ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ಮೇಲೆ ಕೆಂಡಕಾರಿದ್ದ ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಈಗ, ತಣ್ಣಗಾಗಿದ್ದಾರೆ. ರೆಡ್ಡಿ ಅಕ್ರಮ ಗಣಿ ಹೊಂದಿದ್ದು, ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರಕ್ಕೆ ಮಸಿಬಳಿಯುತ್ತಿದ್ದಾರೆ ಎಂದು ಕೆಲವರು ನನ್ನನ್ನು ದಾರಿ ತಪ್ಪಿಸಿದ್ದರು. ಹೀಗಾಗಿ ರೆಡ್ಡಿ ಅವರನ್ನು ಅಪಾರ್ಥ ಮಾಡಿಕೊಂಡಿದ್ದೆ ಎಂದು ಚೆನ್ನಿಗಪ್ಪ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಲಂಚ ಪ್ರಕರಣವನ್ನು ಸಮಾಧಿ ಮಾಡುತ್ತಿವೆ. ಈ ವಿಚಾರವನ್ನು ಸದನದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X